ವಿದೇಶದಲ್ಲಿ ವಿಶ್ರಾಂತಿ ಪಡೆದು ಭಾರತಕ್ಕೆ ವಾಪಸ್ಸಾದ ಶಾಸಕ ತನ್ವೀರ್ ಸೇಠ್….

Promotion

ಮೈಸೂರು,ಜ,8,2020(www.justkannada.in):  ವ್ಯಕ್ತಿಯಿಂದ ಚಾಕು ಇರಿತಕ್ಕೊಳಗಾಗಿ ಮೈಸೂರಿನಲ್ಲಿ ಚಿಕಿತ್ಸೆ ಪಡೆದು ಬಳಿಕ ವಿದೇಶಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಇದೀಗ ವಿದೇಶದಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ.

ನವೆಂಬರ್ 18ರಂದು ಕಾರ್ಯಕ್ರಮವೊಂದರಲ್ಲಿ  ಶಾಸಕ ತನ್ವೀರ್ ಸೇಠ್  ಮೇಲೆ ಕೊಲೆ ಯತ್ನ ನಡೆದಿತ್ತು. ವ್ಯಕ್ತಿಯೊಬ್ಬ ಚಾಕುವಿನಿಮದ ಕತ್ತಿನ ಭಾಗಕ್ಕೆ ಇರಿದಿದ್ದನು. ಈ ವೇಳೆ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದಿತ್ತು. ನಂತರ ಶಾಸಕ ತನ್ವೀರ್ ಸೇಠ್ ಅವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ನಂತರ ವೈದ್ಯರ ಸಲಹೆ ಮೇರೆಗೆ ವಿದೇಶದಲ್ಲು ಚಿಕಿತ್ಸೆ ಪಡೆದಿದ್ದರು.  ಚಿಕಿತ್ಸೆ ನಂತರ ದುಬೈನಲ್ಲೆ ಶಾಸಕ ತನ್ವೀರ್ ಸೇಠ್ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ವಿಶ್ರಾಂತಿ ಮುಗಿಸಿ ತನ್ವೀರ್ ಸೇಠ್ ವಿದೇಶದಿಂದ ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ಇಂದು ಸಂಜೆ ವೇಳೆಗೆ ತನ್ವೀರ್ ಸೇಠ್ ಮೈಸೂರಿಗೆ ಆಗಮಿಸಲಿದ್ದಾರೆ.

Key words: mysore- congress –MLA-Tanveer Sait – returned – India.