ಮೈಸೂರು ಪೊಲೀಸರಿಂದ ಸಂಸದ ಪ್ರತಾಪ್ ಸಿಂಹ ಧಮ್ಕಿ : ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪ.

Promotion

 

ಮೈಸೂರು, ಆ.13, 2021 : (www.justkannada.in news) ಸಂಸದ ಪ್ರತಾಪ್ ಸಿಂಹ, ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ದೂರು ನೀಡಿದ್ದು, ಮಾನಹಾನಿ ಕೇಸ್ ಹಾಕಿ ಪೊಲೀಸಿನವರ ಮೂಲಕ ಧಮ್ಕಿ ಹಾಕುತ್ತಿದ್ದಾರೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಬಂಧ ಪ್ರಾರಂಭಿಸಿದ್ದ ‘ ಸ್ಟೆಪ್ ಡೌನ್ ‘ ಆಸ್ಪತ್ರೆಗೆ ಸಂಬಂಧಿಸಿದಂತೆ ಎರಡು ತಿಂಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ, ಅಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, 16 ಕೋವಿಡ್ ಸೆಂಟರ್ ಬಂದ್ ಮಾಡಿಸಿದ್ದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆ.

ಖಾಸಗಿ ಹೋಟೆಲ್ ಗಳಲ್ಲಿ ಸ್ಪೆಪ್ ಡೌನ್ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಕೋವಿಡ್ ಸೆಂಟರ್ ಗಳು ಜಿಲ್ಲಾಡಳಿತ ಹಾಗೂ ಸರ್ಕಾರದ ಅನುಮತಿ ಪಡೆಯದೇ ಜನರಿಂದ ಹೆಚ್ಚಿನ ಹಣ ಪಡೆಯುವ ವಿಚಾರವಾಗಿ ಆಸ್ಪತ್ರೆ ಬಂದ್ ಮಾಡಿಸಲಾಗಿತ್ತು. ಆದ್ದರಿಂದ ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪೆಪ್ ಡೌನ್ ಆಸ್ಪತ್ರೆ ಬಂದ್ ಮಾಡಿದ್ದರು.

ಈ ಆಸ್ಪತ್ರೆ ತೆರೆಯಲು ಸಂಸದರ ಕೃಪಾ ಕಟಾಕ್ಷ ಇದೆ ಎಂಬುದನ್ನ ನಾವು ಸಾಬೀತು ಮಾಡಿದ್ದೆವು. ಈ ವಿಚಾರವಾಗಿ ನನ್ನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ವಿರುದ್ಧ ಮಾನಹಾನಿಯಾಗಿದೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ದೂರು ನೋಡಿದ್ದಾರೆ. ಪೊಲೀಸರ ಮೂಲಕ ನಮಗೆ ಧಮ್ಕಿ ಹಾಕುತ್ತಿದ್ದಾರೆ. ಈ ಮೂಲಕ ನನ್ನ ಧ್ವನಿ ಅಡಗಿಸಲು ಮುಂದಾಗಿದ್ದಾರೆ. ಈ ರೀತಿಯ ರಾಜಕೀಯ ಮಾಡುವವರು ನೀವು ಸಂಸದರಾಗಲು ಯೋಗ್ಯರಾ.!?

ನಾನೊಬ್ಬ ರಾಷ್ಟ್ರೀಯ ಪಕ್ಷದ ರಾಜ್ಯ ವಕ್ತಾರಾ. ರಾಜ್ಯದ ವಿರೋಧ ಪಕ್ಷದಲ್ಲಿರುವ ನಾವು ಜನರಿಗೆ ಸತ್ಯ ತಿಳಿಸುತ್ತೇವೆ. ನಿಮ್ಮ ಧಮ್ಕಿಗಳಿಗೆ ನಾನು ಹೆದರಲ್ಲ, ಬದಲಾಗಿ ಹೋರಾಟ ದುಪ್ಪಟ್ಟು ಮಾಡುತ್ತೇನೆ. ನಾನು ಸಾಕಷ್ಟು ಬಾರಿ ನಿಮಗೆ ಸವಾಲು ಮಾಡಿದ್ದೇನೆ. ಕಳೆದ 7ವರ್ಷದಿಂದ ಕೊಟ್ಟಿರುವ ನಿಮ್ಮ ಕೊಡುಗೆ ಬಗ್ಗೆ ತಿಳಿಸಿ. ನ್ಯಾಷನಲ್ ಹೈವೆ, ಮೇಕೆದಾಟು ಯೋಜನೆ ನಿಮ್ಮ ಕೆಲಸವಾ.!? ನಿಮಗೆ ಧೈರ್ಯ ಇದ್ದರೆ ಚರ್ಚೆಗೆ ಬನ್ನಿ. ಸಂಸದ ಪ್ರತಾಪ್ ಸಿಂಹಗೆ ಮತ್ತೆ ಸವಾಲೆಸೆದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್.


key words : mysore-congress-m.lakshman-pressmeet-bjp