ನೆರೆ ಸಂತ್ರಸ್ತರ ನೆರವಿಗೆ ಮೈಸೂರು ಪಾಲಿಕೆ: ಹುಂಡಿ ಹಿಡಿದು ಹಣ ಸಂಗ್ರಹಕ್ಕೆ ಮುಂದಾದ ಮೇಯರ್ ಮತ್ತು ಪಾಲಿಕೆ ಸದಸ್ಯರು…

Promotion

ಮೈಸೂರು,ಆ,16,2019(www.justkannada.in):  ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡು ಕಂಗಾಲಾಗಿರುವ ನೆರೆ ಸಂತ್ರಸ್ತರ ನೆರವಿಗೆ ಇದೀಗ ಮೈಸೂರು ಮಹಾನಗರ ಪಾಲಿಕೆ ಧಾವಿಸಿದೆ.

ಹೌದು ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಲು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತು ಪಾಲಿಕೆ ಸದಸ್ಯರು, ಅಧಿಕಾರಿಗಳು ಸಿಬ್ಬಂದಿಗಳು ಹುಂಡಿ ಹಿಡಿದು ಬೀದಿಗಿಳಿದು ಧನ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಪಾದಯಾತ್ರೆಗೆ  ಹಣ ಸಂಗ್ರಹದ ಹುಂಡಿಗೆ ಪಾಲಿಕೆ ಹೆಚ್ಚುವರಿ ಆಯುಕ್ತ ಕಾಂತರಾಜು ಅವರಿಂದ ಹಣ ಹಾಕಿಸುವ ಮೂಲಕ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ಪಡೆದುಕೊಂಡರು. ಮೈಸೂರು ಮಹಾನಗರಪಾಲಿಕೆಯ ಸದಸ್ಯರು ಅಧಿಕಾರಿಗಳು ಸಿಬ್ಬಂದಿಗಳು ಸೇರಿ ನಾಲ್ಕು ತಂಡಗಳಾಗಿ  ಧನ ಸಂಗ್ರಹಕ್ಕಿಳಿದಿದ್ದಾರೆ,.

ಇರುವ 65 ಸದಸ್ಯರ ಪೈಕಿ 4ತಂಡಗಳಾಗಿ ವಿಂಗಡಣೆ ಮಾಡಿ  ಸಂಗ್ರಹಕ್ಕೆ ಹೊರಟಿದ್ದು   ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಟೀಮ್ ಸಹ ಸಾಥ್ ನೀಡಿದೆ. ನಗರದ  ಪ್ರಮುಖ ರಸ್ತೆಗಳಲ್ಲಿ  ನಾಲ್ಕು ತಂಡಗಳು ಹಣ ಸಂಗ್ರಹ ಮಾಡಲಿದ್ದು, ಈಗಾಗಲೇ  ಪ್ರತಿ ಸದಸ್ಯರು 10 ಸಾವಿರ ರೂ. ಗಳನ್ನ ನೀಡಿದ್ದಾರೆ, ಪಾಲಿಕೆ ವತಿಯಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸಂತ್ರಸ್ಥರ  ಪರಿಹಾರ ನಿಧಿಗೆ  ಕಳುಹಿಸಲಾಗುತ್ತದೆ.

Key words: Mysore city corporation-  Neighborhood Victims-mayor –member- money