ಮೈಸೂರು ಪೌರಕಾರ್ಮಿಕರಿಗಾಗಿ ‘ಕಾಣದಂತೆ ಮಾಯವಾದನು’ ಚಿತ್ರತಂಡದಿಂದ ವಿಶೇಷ ಪ್ರದರ್ಶನ…

Promotion

ಮೈಸೂರು,ಫೆ,19,2020(www.justkannada.in):  ಸ್ವಚ್ಛ ನಗರಕ್ಕಾಗಿ ದುಡಿದ ಮೈಸೂರು ಪಾಲಿಕೆ ಪೌರಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಕಾಣದಂತೆ ಮಾಯವಾದನು ಚಿತ್ರತಂಡದಿಂದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.

ಬ್ಯಾಕ್ ಬೆಂಚರ್ಸ್ ಮೋಷನ್ ಪಿಚ್ಚರ್ ಸಂಸ್ಥೆ ನಿರ್ಮಿಸಿರುವ “ಕಾಣದಂತೆ ಮಾಯವಾದನು” ಚಿತ್ರದ ತಂಡ ಮೈಸೂರು ಪೌರಕಾರ್ಮಿಕರಿಗಾಗಿ  ವಿಶೇಷ ಪ್ರದರ್ಶನ ಆಯೋಜಿಸಿದೆ. ಮೈಸೂರಿನ ಉಡ್ ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಆಯೋಜಿಸಲಾಗಿದ್ದು  ಎಲ್ಲಾ ಪೌರಕಾರ್ಮಿಕರು ಭಾಗವಹಿಸಿ ಚಿತ್ರ ವೀಕ್ಷಿಸಬೇಕೆಂದು ಚಿತ್ರ ತಂಡ ಮನವಿ ಸಲ್ಲಿಸಿದೆ.

ಈ ಬಗ್ಗೆ ಸ್ವಚ್ಚ ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಹಿತಿ ನೀಡಿದ ಪಾಲಿಕೆ ಆಯುಕ್ತ ಗುರುದತ್ತ್ ಹೆಗಡೆ,  ಸ್ವಚ್ಛ ಸರ್ವೇಕ್ಷಣೆಗೆ ಶ್ರಮಿಸಿದ ಪೌರಕಾರ್ಮಿಕರಿಗೆ ಉಚಿತ ಮನರಂಜನೆ ನೀಡುವ ನಿಟ್ಟಿನಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

Key words: Mysore-city –corporation-labor- Special show-film-kanadanthe mayavadanu