ಸ್ವಚ್ಚತೆ  ಕುರಿತು ಮೈಸೂರು ಪಾಲಿಕೆಯಿಂದ ವಿನೂತನ ಕಾರ್ಯಕ್ರಮ: ಕಲಾವಿದರ ಕೈ ಚಳಕದಿಂದ ಗೋಡೆಗಳ ಮೇಲೆ ಮೂಡಿದ ಜಾಗೃತಿ ಚಿತ್ರಗಳು….

ಮೈಸೂರು,ಜ,9,2020(www.justkannada.in): ಸ್ವಚ್ಛ ಸರ್ವೇಕ್ಷಣೆ 2020 ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ  ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿಗಾಗಿ  ಚಿತ್ರಕಲಾ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.

ಚಿತ್ರಕಲಾ ಸ್ಪರ್ಧೆಗೆ ಮೈಸೂರು ಮಹಾನಗರ ಪಾಲಿಕೆ ಅಯುಕ್ತ ಗುರುದತ್ತ್ ಹೆಗ್ಡೆ ಚಾಲನೆ ನೀಡಿದರು. ಸಾರ್ವಜನಿಕರಿಗೆ ಪೇಂಟಿಂಗ್ ಮೂಲಕ ಸ್ವಚ್ಚತಾ ಅರಿವು ಮೂಡಿಸಲು ಈ ವಿನೂತನ  ಕಾರ್ಯಕ್ರಮ ಆಯೋಜಿಸಿದ್ದು, ರೇಸ್ ಕೋರ್ಸ್ ರಸ್ತೆಯ ಮೃಗಾಲಯದ ಗೋಡೆಗಳ ಮೇಲೆ ಚಿತ್ರಕಲಾ ಸ್ಪರ್ಧೆ ನಡೆಯಿತು.

ಚಿತ್ರಕಲಾ ಸ್ಪರ್ಧೆಯಲ್ಲಿ  25ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದರು. ಮೃಗಾಲಯದ ಗೋಡೆಗಳ ಮೇಲೆ ಕಲಾವಿದರ ಕೈಚಳಕದಿಂದ  ಸ್ವಚ್ಛತೆ ಬಗೆಗಿನ ಜಾಗೃತಿ ಚಿತ್ರಗಳು ಮೂಡಿದವು. ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  ವಿಜೇತರಿಗೆ ಪ್ರಥಮ 10ಸಾವಿರ, ಹಾಗೂ ದ್ವಿತೀಯ 5ಸಾವಿರ ಬಹುಮಾನ. ಕಲಾವಿದರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.

Key words: Mysore city corporation-cleanliness-Awareness – walls – artist