ಮೈಸೂರು ಮಹಾನಗರ ಪಾಲಿಕೆಯ ಅಯವ್ಯಯ ಮಂಡನೆ: ಘೋಷಣೆಯಾದ ಯೋಜನೆಗಳೇನು ಗೊತ್ತೆ..?

Promotion

 ಮೈಸೂರು,ಏಪ್ರಿಲ್,29,2021(www.justkannada.in):  2021-21ನೇ ಸಾಲಿನ ಮೈಸೂರು ಮಹಾನಗರಪಾಲಿಕೆ ಆಯವ್ಯಯ‌ ಮಂಡನೆ  ಮಾಡಲಾಗಿದ್ದು, ಜಗನ್‌ಮೋಹನ ಅರಮನೆಯ ಬಳಿ ಅಂಡರ್‌ ಪಾಸ್ ನಿರ್ಮಾಣ ಸೇರಿ ಹಲವು ಯೋಜನೆ ಘೋಷಿಸಲಾಗಿದೆ.jk

ಇತಿಹಾಸದಲ್ಲಿ ಮೊದಲ ಬಾರಿಗೆ ವರ್ಚ್ಯುಯಲ್ ಮೂಲಕ ಬಜೆಟ್ ಮಂಡನೆ ಮಾಡಲಾಗಿದ್ದು ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ಎಂ.ಎಸ್.ಶೋಭಾ  ಅವರು ಬಜೆಟ್ ಮಂಡಿಸಿದರು. ಕೊರೋನಾ ಕಾರಣದಿಂದಾಗಿ ಮಹಾನಗರ ಪಾಲಿಕೆ ಆಯುಕ್ತರು, ಮಹಾಪೌರರು, ಉಪಮಹಾಪೌರರು ಹಾಗೂ ಪ್ರಮುಖ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಹಾಜರಾಗಿದ್ದರು. ಉಳಿದವರಿಗೆ ಆನ್‌ಲೈನ್ ಮೂಲಕ ಬಜೆಟ್ ವಿಶೇಷ ಸಭೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು.

ಇಂದು ಮಂಡಿಸಿದ ಬಜೆಟ್ 987.68  ಕೋಟಿ ರೂ. ಗಾತ್ರದ ಬಜೆಟ್ ಆಗಿದ್ದು, ಜಗನ್‌ ಮೋಹನ ಅರಮನೆಯ ಬಳಿ ಅಂಡರ್‌ ಪಾಸ್ ನಿರ್ಮಾಣ, ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಪ್ರೀ-ಕ್ಯಾಸ್ಟ್ ಮ್ಯಾನ್‌ ಹೋಲ್‌ಗಳ ನಿರ್ಮಾಣ ಸೇರಿದಂತೆ ಕೆಲವು ಹೊಸ ಯೋಜನೆಗಳನ್ನೊಳಗೊಂಡಿದೆ. 981.55 ಕೋಟಿ ಆದಾಯ ನಿರೀಕ್ಷೆ ಹೊಂದಿದ್ದು. ಉಳಿತಾಯ – 6.13  ಕೋಟಿ ರೂ ಆಗಿದೆ.

ಬಜೆಟ್ ಮಂಡನೆ ವೇಳೆ ಮಾತನಾಡಿದ  ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ಎಂ.ಎಸ್.ಶೋಭಾ  ಅವರು, ೨೦೨೦-೨೧ನೇ ಸಾಲಿನ ಆಯವ್ಯಯದಲ್ಲಿ 618.71 ಕೋಟಿ ರೂ. ಜಮೆಗಳನ್ನು ನಿರೀಕ್ಷಿಸಲಾಗಿತ್ತು. ವರ್ಷಾಂತ್ಯಕ್ಕೆ   ೪೬೮.೪೯ ಕೋಟಿ ರೂ. ಜಮೆಗಳನ್ನು ಸಂಗ್ರಹಿಸಲಾಗಿದೆ. ೮೭೧.೫೩ ಕೋಟಿ ರೂ. ಪಾವತಿಸಲು ಅವಕಾಶ ಮಾಡಲಾಗಿತ್ತು. ಸ್ವಯಂ ಸಂಪನ್ಮೂಲಗಳ ಹಾಗೂ ಅನುದಾನಗಳ ಲಭ್ಯತೆಯ ಅನುಸಾರವಾಗಿ ೪೨೪.೫೧ ರೂ. ಪಾವತಿ ಮಾಡಲಾಗಿದೆ

೨೦೨೦-೨೧ನೇ ಸಾಲಿನಲ್ಲಿ ೧೦.೩೨ ಕೋಟಿ ರೂ. ಮುಕ್ತನಿಧಿ ಅನುದಾನ ನಿರೀಕ್ಷಿಸಲಾಗಿತ್ತು. ರಾಜ್ಯ ಸರ್ಕಾರ ೧೯.೧೭ ಕೋಟಿ ರೂ. ಬಿಡುಗಡೆ ಮಾಡಿದೆ. ಬೀದಿದೀಪ, ನೀರು ಸರಬರಾಜು ಸ್ಥಾವರಗಳ ವಿದ್ಯುಚ್ಛಕ್ತಿ ಬಿಲ್ ಪಾವತಿಗಾಗಿ ೭೫.೨೩ ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು. ಆದರೆ ಸರ್ಕಾರ ೭೬ ಕೋಟಿ ರೂ. ನೀಡಿದೆ. ನಗರಪಾಲಿಕೆ ಅಧಿಕಾರಿ/ನೌಕರರ ವೇತನ, ನಿವೃತ್ತ ನೌಕರರ ಪಿಂಚಣಿಗಾಗಿ ೬೮.೫೨ ಕೋಟಿ ರೂ., ೧೫ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ೬೯.೩೯ ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿತ್ತು. ಅದರ ಬದಲು ಕ್ರಮವಾಗಿ ೬೬.೦೫ ಕೋಟಿ ರೂ., ೫೨.೦೪ ಕೋಟಿ ರೂ. ಬಿಡುಗಡೆಯಾಗಿದೆ  ಎಂದು ಶೋಭಾ ಅವರು ಮಾಹಿತಿ ನೀಡಿದರು.

ಇನ್ನುಳಿದಂತೆ ಜನಪ್ರತಿನಿಧಿಗಳ ಪ್ರದೇಶಾಭಿವೃದ್ಧಿ ಅನುದಾನದಿಂದ ೨೫ ಕೋಟಿ ರೂ., ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ೩೦ ಕೋಟಿ ರೂ. ನಿರೀಕ್ಷಿಸಲಾಗಿದೆ. ಎಸ್‌ಎಫ್‌ ಸಿ ವಿಶೇಷ ಅನುದಾನದ ಅಡಿಯಲ್ಲಿ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರಗಳ ಅಭಿವೃದ್ಧಿಗಾಗಿ ತಲಾ ೧೫ ಕೋಟಿ ರೂ. ಹಂಚಿಕೆ ಮಾಡಲಾಗಿದೆ (ಒಟ್ಟು ೩೦ ಕೋಟಿ ರೂ.). ಈ ಪೈಕಿ ೧೭.೨೫ ಕೋಟಿ ರೂ.ಬಿಡುಗಡೆಯಾಗಿದ್ದು, ಉಳಿದ ೧೨.೭೪ ಕೋಟಿ ರೂ.ಗಳನ್ನು ಹಾಗೂ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ೨೫ ಕೋಟಿ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಶೋಭಾ ಅವರು ತಿಳಿಸಿದರು.mysore-city-corporation-budget-plans-announced

ಬಜೆಟ್ ನ ಪ್ರಮುಖಾಂಶ ಹೀಗಿದೆ ನೋಡಿ…

ಕೊರೊನಾ ಕಾಲದಲ್ಲಿ ಆರೋಗ್ಯ ಯೋಜನೆಗಳಿಗೆ ಒತ್ತು

ನಗರಪಾಲಿಕೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ವರ್ಷಕ್ಕೆ ಒಂದು ಬಾರಿ ಉಚಿತ ವೈದ್ಯಕೀಯ ತಪಾಸಣೆ ನಡೆಸಲು ಹಾಗೂ ಪಾಲಿಕೆ ವತಿಯಿಂದ ವೈದ್ಯಕೀಯ ವೆಚ್ಚ ಮರುಬರಿಸಲು ೨೫ ಲಕ್ಷ ರೂ.

.ಕೊರೊನಾ ದುಷ್ಪರಿಣಾಮಗಳನ್ನು ಎದುರಿಸಲು ೬.೫ ಕೋಟಿ ರೂ. ಸರ್ಕಾರದಿಂದ ಪರಿಹಾರ ದೊರೆಯದ ಪಾಲಿಕೆಯ ನೌಕರರಿಗೆ ೫ ಲಕ್ಷ ರೂ. ಪರಿಹಾರ. ಬಡತನದ ರೇಖೆಗಿಂದ ಕೆಳಗಿರುವ ನಾಗರೀಕರಿಗೆ ವೈದ್ಯಕೀಯ ತಪಾಸಣೆ ಮಾಡಲು ಅಗತ್ಯ ಕಟ್ಟಡ ಹಾಗೂ ಯಂತ್ರೋಪಕರಣಗಳ ಖರೀದಿಗೆ ೭.೫ ಕೋಟಿ ರೂ. ಮಾಧ್ಯಮದವರ ಕೊರೊನಾ ಚಿಕಿತ್ಸಾ ವೆಚ್ಚ ಮರುಬರಿಸಲು ೨೫ ಲಕ್ಷ ರೂ .

ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಪ್ರತಿ ವಲಯಕ್ಕೆ ಒಂದರಂತೆ ಡೀಸೆಲ್ ತಯಾರಿಕಾ ಘಟಕ ಸ್ಥಾಪಿಸಲು ೧ ಕೋಟಿ ರೂ.ಮೀಸಲು.

ವಲಯ ಕಚೇರಿಗಳು ಹಾಗೂ ಮುಖ್ಯ ಕಚೇರಿಯಲ್ಲಿ ಬ್ಯಾಂಕ್‌ಗಳ ಸಹಯೋಗದೊಂದಿಗೆ ಕ್ಯಾಷ್ ಡೆಪಾಸಿಟ್ ಯಂತ್ರ ಅಳವಡಿಕೆ. ವಿದ್ಯಾರಣ್ಯಪುರಂ, ರಾಯನಕೆರೆ ಮತ್ತು ಕೆಸರೆ ಪ್ರದೇಶಗಳಲ್ಲಿರುವ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕಗಳನ್ನು ನವೀಕರಿಸಲು ೧೦ ಕೋಟಿ ರೂ. ವಿದ್ಯಾರಣ್ಯಪುರಂ ಘಟಕದಲ್ಲಿ ಬಯೋಮೈನಿಂಗ್ ಮಾಡಲು ೭.೩೫ ಕೋಟಿ ರೂ. ಮೀಸಲು.

ವೃತ್ತಗಳ ಸೌಂದರ್ಯೀಕರಣ ಹಾಗೂ ಅಭಿವೃದ್ಧಿಗೆ ೧.೫ ಕೋಟಿ ರೂ., ನಗರಪಾಲಿಕೆ ಮುಖ್ಯ ಕಚೇರಿಯಲ್ಲಿ ಇಲ್ಯುಮಿನೇಟೆಡ್ ದೀಪಗಳ ಅಳವಡಿಕೆ ಹಾಗೂ ಯದುವಂಶದ ರಾಜರೊಬ್ಬರ ಪುತ್ಥಳಿ ನಿರ್ಮಾಣಕ್ಕೆ ೫ ಕೋಟಿ ರೂ. ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ೩ ಕೋಟಿ ರೂ.

ಶುದ್ಧೀಕರಿಸಿದ ಮಲಿನ ನೀರಿನ ಮರುಬಳಕೆಗೆ ೧ ಕೋಟಿ ರೂ. ಪರಿಶಿಷ್ಟ ಜಾತಿ/ವರ್ಗಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ೫೭.೪೨ ಕೋಟಿ ರೂ., ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ೭.೩೯ ಕೋಟಿ ರೂ., ವಿಕಲಷೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ೧೧.೩೦ ಕೋಟಿ ರೂ.

ಹಲವು ಮೂಲಗಳಿಂದ ಮೂಲಗಳಿಂದ ಆದಾಯ ನಿರೀಕ್ಷೆ.

೯೮೭.೬೮ ಕೋಟಿ ರೂ.ಆದಾಯ ನಿರೀಕ್ಷೆ .

ಆಸ್ತಿ ತೆರಿಗೆ – ೧೮೮.೪೪ ಕೋಟಿ ರೂ.

ನೀರಿನ ತೆರಿಗೆ, ಒಳಚರಂಡಿ ನಿರ್ವಹಣಾ ಕರ – ೬೫ ಕೋಟಿ ರೂ.

ನಗರ ಮತ್ತು ಪಟ್ಟಣ ಯೋಜನೆ – ೬.೬೫ ಕೋಟಿ ರೂ.

ಉದ್ದಿಮೆ ಪರವಾನಗಿ ಶುಲ್ಕ – ೯ ಕೋಟಿ ರೂ.

ನಗರಪಾಲಿಕೆ ಆಸ್ತಿಗಳಿಂದ ಬರುವ ಬಾಡಿಗೆ – ೪.೨೫ ಕೋಟಿ ರೂ. ನಿರೀಕ್ಷೆ.

ನಗರಪಾಲಿಕೆ ಅಧಿಕಾರಿಗಳಿಗೆ ಪರಿಸರ ಸ್ನೇಹಿ ವಾಹನಗಳು ಬಳಕೆಗೆ ನಿರ್ಧಾರ.

. ಈ ಸಾಲಿನಲ್ಲಿ ಪ್ರಾಯೋಗಿಕವಾಗಿ ಕನಿಷ್ಠ ಒಂದು ಪ್ಯಾಕೇಜ್‌ನಲ್ಲಿ ವಾಹನಗಳನ್ನು ಕೊಳ್ಳಲು ಬಜೆಟ್ ನಲ್ಲಿ ನಿರ್ಧಾರ.

ಪ್ರೀ-ಕ್ಯಾಸ್ಟ್ ಮ್ಯಾನ್‌ಹೋಲ್, ಅಂಡರ್‌ಪಾಸ್, ಕ್ರೀಡಾಂಗಣ ನಿರ್ಮಾಣ.

ಪ್ರೀ-ಕ್ಯಾಸ್ಟ್ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲು  ೬ ಕೋಟಿ ರೂ. ಮೀಸಲು.

ನಗರದ ಹೃದಯ ಭಾಗದಲ್ಲಿರುವ ಜಗನ್ಮೋಹನ ಅರಮನೆಯ ಬಳಿ ಅಂಡರ್‌ಪಾಸ್ ನಿರ್ಮಿಸಲು ೨ ಕೋಟಿ ರೂ.,

ನಗರಪಾಲಿಕೆ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ೫೦ ಲಕ್ಷ ರೂ.,

ವಿಜಯನಗರ ರೈಲ್ವೇ ಬಡಾವಣೆಯಲ್ಲಿ ಕ್ರೀಡಾಂಗಣ ಅಭಿವೃದ್ಧಿಪಡಿಸಲು ೧ ಕೋಟಿ ರೂ. .

Key words: Mysore city corporation- Budget –plans- announced.