ಚೀಟಿ ವ್ಯವಹಾರದಲ್ಲಿ  ಕೋಟ್ಯಾಂತರ ರೂ. ವಂಚಿಸಿ ನಾಪತ್ತೆಯಾಗಿದ್ದ  ಆರೋಪಿ  ಅಂದರ್…

Promotion

ಮೈಸೂರು,ಜೂ,7,2019(www.justkannada.in): ಚೀಟಿ ವ್ಯವಹಾರದಲ್ಲಿ  ಕೋಟ್ಯಾಂತರ ರೂ. ವಂಚಿಸಿ ನಾಪತ್ತೆಯಾಗಿದ್ದ ಆರೋಪಿಯನ್ನ ಮೈಸೂರು ಪೊಲೀಸರು  ಬಂಧಿಸಿದ್ದಾರೆ.

ಗುರುಮೂರ್ತಿ @ ರಾಜು ಬಂಧಿತ ಆರೋಪಿ. ಈತ ಮೈಸೂರಿನ ಶ್ರೀರಾಂಪುರದ ನಿವಾಸಿಯಾಗಿದ್ದು ಸುಮಾರು ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದನು. ಇದೀಗ ಮೋಸ ಹೋದವರ ಕೈಗೇ ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದು ಈತನನ್ನ ಬಂಧಿಸಲಾಗಿದೆ.

ಗುರುಮೂರ್ತಿ ಲಕ್ಷಾಂತರ ರೂ ಮೌಲ್ಯದ ಚೀಟಿಗಳನ್ನ ನಡೆಸುತ್ತಿದ್ದನು. ಈ ನಡುವೆ ಈತ ನೂರಾರು ಗ್ರಾಹಕರಿಗೆ ಪಂಗನಾಮ ಹಾಕಿ ರಾತ್ರೋ ರಾತ್ರಿ  ಎಸ್ಕೇಪ್ ಆಗಿದ್ದ. ಆರೋಪಿ ಮನೆಯವರು ಬಳಿಕ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು. ಇದೀಗ  ನಿನ್ನೆ ಸಂಜೆ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಆರೋಪಿ ಗುರುಮೂರ್ತಿ ಸಿಕ್ಜಿಬಿದ್ದಿದ್ದಾನೆ.

ವಂಚನೆಗೆ ಒಳಗಾದವರು  ಆರೋಪಿಯನ್ನ ಬೆಂಗಳೂರು ಪೊಲೀಸರ ನೆರವಿನಿಂದ ಮೈಸೂರಿಗೆ ಕರೆತಂದಿದ್ದಾರೆ.  ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಗುರುಮೂರ್ತಿ ಮೇಲೆ  ವಂಚನೆ ಪ್ರಕರಣ ದಾಖಲಾಗಿದೆ. ಗುರುಮೂರ್ತಿ ಸೇರಿದಂತೆ ನಾಲ್ವರ ಮೇಲೆ  ಕೇಸ್ ದಾಖಲಾಗಿದ್ದು, ಮೂವರು ಜಾಮೀನು ಪಡೆದು ಬಿಡುಗಡೆ ಆಗಿದ್ರೆ ಗುರುಮೂರ್ತಿ ಮಾತ್ರ ತಲೆಮರೆಸಿಕೊಂಡಿದ್ದನು.

Key words: #mysore #Cheating #business #Arrest  #accused