ಚಾಮುಂಡೇಶ್ವರಿ ವರ್ಧಂತಿಯಲ್ಲಿ  ಸರಗಳ್ಳರ ಕೈಚಳಕ:  ವೃದ್ದೆಯ ಸರ ದೋಚಿದ ಖದೀಮರು..

Promotion

ಮೈಸೂರು,ಜು,24,2019(www.justkannada.in):  ತಾಯಿ ಚಾಮುಂಡೇಶ್ವರಿ ವರ್ಧಂತಿ ನಡೆಯುತ್ತಿದ್ದ ವೇಳೆ ವೃದ್ಧ ಭಕ್ತೆಯೊಬ್ಬರ ಸರಗಳ್ಳರು ದೋಚಿ ಪರಾರಿಯಾಗಿರುವ ಘಟನೆ ಇಂದು ನಡೆದಿದೆ.

ಇಂದು ತಾಯಿಚಾಮುಂಡೇಶ್ವರಿಯ ವರ್ಧಂತಿ. ಈ ಹಿನ್ನೆಲೆ ಚಾಮುಂಡಿ ದೇವಿಯನ್ನ ಹೊತ್ತು ಸಾಗುತ್ತಿದ್ದ ಚಿನ್ನದ ಪಲ್ಲಕ್ಕಿಗೆ ಕೈ ಮುಗಿವ ವೇಳೆ ಸರಗಳ್ಳರು ತಮ್ಮ ಕೈಚಳಕ ತೋರಿದಿದ್ದಾರೆ. ಮೈಸೂರಿನ ಸಿದ್ಧಾರ್ಥ ನಗರದ ನಿವಾಸಿ ಚಾಮಮ್ಮ ಎಂಬುವವರ 35 ಗ್ರಾಂ ಚಿನ್ನದ ಸರವನ್ನ ಕಳ್ಳರು ಲಪಟಾಯಿಸಿದ್ದಾರೆ.

ಈ ಕುರಿತು ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-Chamundeshwari Vardhanthi- thief-chain snatching