ಮೈಸೂರು ಚಾಮರಾಜೇಂದ್ರ ಮೃಗಾಲಯದ ವಾರದ ರಜೆ ರದ್ಧು…

Promotion

ಮೈಸೂರು,ಅ,14,2019(www.justkannada.in): ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನೀಡಲಾಗುತ್ತಿದ್ದ  ಪ್ರತಿ ಮಂಗಳವಾರದ ರಜೆಯನ್ನ ರದ್ದುಗೊಳಿಸಲಾಗಿದೆ. ಈ ಮೂಲಕ ಮಂಗಳವಾರವೂ  ಮೈಸೂರು ಮೃಗಾಲಯದಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ಪ್ರತಿ ಮಂಗಳವಾರ ಮೃಗಾಲಯದ ಸಿಬ್ಬಂದಿಗಳಿಗೆ ವಾರದ ರಜೆ ನೀಡಲಾಗಿತ್ತು. ಆದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆ ರಜೆಯನ್ನು ಮೃಗಾಲಯ ಇಒ ಅಜಿತ್ ಕುಲಕರ್ಣಿ ರದ್ದುಗೊಳಿಸಿ, ಆದೇಶಿಸಿದ್ದಾರೆ. ಈ ಮೂಲಕ ಮೈಸೂರು ಮೃಗಾಲಯ ವಾರದ ಎಲ್ಲಾ ದಿನಗಳು ಪ್ರವಾಸಿಗರಿಗೆ ತೆರೆದಿರುತ್ತದೆ ಎಂಬ ಸಂತಸದ ಸುದ್ದಿ  ನೀಡಿದ್ದಾರೆ

ಮೈಸೂರಿಗೆ ಭೇಟಿ ನೀಡುವ ಅನೇಕ ಪ್ರವಾಸಿಗರು, ಅಲ್ಲಿನ ಪ್ರಾಣಿಗಳ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟು, ಪ್ರಾಣಿಗಳನ್ನು ನೋಡಿ ಆನಂದ ಪಟ್ಟು ಬಂದೇ ಬರುತ್ತಾರೆ.  ಇನ್ನು ನಾಳೆ ಮೃಗಾಲಾಯ ಕಾರ್ಯನಿರ್ವಹಿಸಲಿದೆ.

Key words: Mysore -Chamrajendra Zoo- weekly –holiday-cancel