ಅಕ್ರಮವಾಗಿ ರಕ್ತಚಂದನ ಮರಗಳನ್ನ ಸಂಗ್ರಹಿಸಿದ್ದ ವ್ಯಕ್ತಿ ಬಂಧನ: 80 ಲಕ್ಷ ಮೌಲ್ಯದ ರಕ್ತಚಂದನ ಮರದ ತುಂಡುಗಳು ವಶಕ್ಕೆ…

Promotion

ಮೈಸೂರು,ಡಿ,22,2019(www.justkannada.in): ಅಂತರಾಷ್ಟ್ರೀಯ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಅಕ್ರಮವಾಗಿ ರಕ್ತಚಂದನ ಮರಗಳನ್ನ ಸಂಗ್ರಹಿಸಿದ್ದ ಆರೋಪಿಯನ್ನ ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಪುಲಕೇಶಿ ರಸ್ತೆ, ಲಷ್ಕರ್ ಮೊಹಲ್ಲಾದ ನಿವಾಸಿ ಫೈರೋಜ್ ಅಲಿಖಾನ್ ಬಂಧಿತ ಆರೋಪಿ. ಬಂಧಿತನಿಂದ 80 ಲಕ್ಷ ಮೌಲ್ಯದ 750 ಕೆ.ಜಿ ತೂಕದ 80 ರಕ್ತಚಂದನದ ಮರದ ತುಂಡುಗಳನ್ನ ವಶಕ್ಕೆ ಪಡೆಯಲಾಗಿದೆ. ಮಾಹಿತಿ ಮೇರೆಗೆ ಲಷ್ಕರ್ ಮೊಹಲ್ಲಾದ ಪುಲಕೇಶಿ ರಸ್ತೆಯಲ್ಲಿದ್ದ ಆರೋಪಿ ಪುಲಕೇಶಿ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಫೈರೋಜ್ ಅಲಿಖಾನ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಈ ವೇಳೆ  ಫೈರೋಜ್ ಅಲಿಖಾನ್ ಅಕ್ರಮವಾಗಿ ರಕ್ತಚಂದನ ಮರಗಳನ್ನ ಸಂಗ್ರಹಿಸಿಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ನಂತರ ಪೊಲೀಸರು ರಕ್ತಚಂದನ ಮರಗಳ ತುಂಡುಗಳನ್ನ ವಶಕ್ಕೆ ಪಡೆದಿದ್ದಾರೆ. ಸಿಸಿಬಿ ವಿಭಾಗದ ಎಸಿಪಿ ವಿ.ಮರಿಯಪ್ಪ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಕಿರಣ್ ಕುಮಾರ್, ಮಂಡಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅರುಣ್  ಎಎಸ್ ಐ ಚಂದ್ರೇಗೌಡ ಸೇರಿ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Key words: mysore-CCB- arrested – illegally- collecting-  80 lakhs -worth – trees -seized