ಕಾರಿನ ಕಿಟಕಿ ಗಾಜು ಹೊಡೆದು 10 ಲಕ್ಷ ರೂ. ಕಳ್ಳತನ…

Promotion

ಮೈಸೂರು,ನವೆಂಬರ್,28,2020(www.justkannada.in): ದುಷ್ಕರ್ಮಿಗಳು ಕಾರಿನ ಕಿಟಕಿ ಗಾಜು ಹೊಡೆದು ಕಾರಿನಲ್ಲಿದ್ಧ 10 ಲಕ್ಷ  ರೂ ಹಣವನ್ನ ಕಳುವು ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.I didn't knew CM BSY will think so cheaply - KPCC President D.K. Shivakumar

ಮೈಸೂರಿನ ವಿವಿ ಪುರಂನಲ್ಲಿ ಈ ಘಟನೆ ನಡೆದಿದೆ. ಪಿರಿಯಾಪಟ್ಟಣದ ಮನೋಜ್ ಕುಮಾರ್ ಅವರಿಗೆ ಸೇರಿದ ಹಣ ಎನ್ನಲಾಗಿದೆ. ಚಿನ್ನ ಬೆಳ್ಳಿ ವ್ಯಾಪಾರಿಯಾಗಿರುವ ಮನೋಜ್ ಕುಮಾರ್. ವ್ಯಾಪಾರಕ್ಕಾಗಿ ಹಣದ ಜೊತೆ ಮೈಸೂರಿಗೆ ಬಂದಿದ್ದರು.mysore-car-window-glass-10-lakh-theft

ಈ ನಡುವೆ ಮನೋಜ್ ಕುಮಾರ್ ಕಾರು ನಿಲ್ಲಿಸಿ ಬ್ಯಾಂಕ್‌ ನಲ್ಲಿ ಸ್ಟೇಟ್‌ ಮೆಂಟ್ ಪಡೆಯಲು ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನ ಕಾರಿನ ಕಿಟಕಿ ಗಾಜು ಹೊಡೆದು ಕಾರಿನಲ್ಲಿದ್ಧ 10 ಲಕ್ಷ ರೂ ಹಣವನ್ನ ಎಗರಿಸಿದ್ದಾರೆ ಎನ್ನಲಾಗಿದೆ. ಇನ್ನು  ಸ್ಥಳಕ್ಕೆ ವಿ ವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- car- window -glass – 10 lakh- Theft.