ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು.

tractor-collision-bike-bike-rider-dies-on-the-spot-mysore
Promotion

ಮೈಸೂರು,ಮಾರ್ಚ್,30,2022(www.justkannada.in): ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ  ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸೀಗೂರು ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.

35 ವರ್ಷದ ಷಡಕ್ಷರಿಸ್ವಾಮಿ ಮೃತಪಟ್ಟ ಬೈಕ್ ಸವಾರ.  ನಿನ್ನೆ ಸಂಜೆ  ಈ ಘಟನೆ ನಡೆದಿದ್ದು, ತಾಲೂಕಿನ ಮೇಲೂರು ಗ್ರಾಮದ ನಿವಾಸಿಯಾಗಿರುವ ಷಡಕ್ಷರಿಸ್ವಾಮಿ ಅಲಿಯಾಸ್ ಮಂಜು, ಕೆಲಸದ ನಿಮಿತ್ತ ಪಿರಿಯಾಪಟ್ಟಣಕ್ಕೆ ತೆರಳಿ ಹಿಂತಿರುಗುತ್ತಿದ್ದರು.tractor-collision-bike-bike-rider-dies-on-the-spot-mysore

ಈ ವೇಳೆ ಕೇರಳ ಮೂಲದ ಕಾರು ಡಿಕ್ಕಿ ಬೈಕ್ ಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ  ಕೇರಳ ಮೂಲದ 5 ವಿದ್ಯಾರ್ಥಿಗಳಿದ್ದರು. ಇನ್ನು ಅಜಾಗರೂಕತೆ ಹಾಗೂ ವೇಗವಾಗಿ ಬಂದ ಹಿನ್ನೆಲೆ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರು ಚಾಲಕ ಹಾಗೂ ಆತನ ಸ್ನೇಹಿತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: mysore-car-bike-accident