‘ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ’ – ವಿಷಾಧಿಸಿದ ಎಂಎಲ್ಸಿ ವಿಶ್ವನಾಥ್..

Promotion

ಮೈಸೂರು, ಮೇ 26, 2021 : (www.justkannada.in news) ಜಿಂದಾಲ್‌ ಕಂಪನಿಗೆ ಭೂಮಿ ನೀಡುವ ವಿಚಾರ. ಗುತ್ತಿಗೆ ನವೀಕರಿಸಿ ಮಾರಾಟ ಮಾಡಬೇಡಿ ಎಂದು ಎಂಎಲ್ಸಿ ಎಚ್.ವಿಶ್ವನಾಥ್, ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಹೇಳಿದಿಷ್ಟು….

ನಾಳೆ ಸಚಿವ ಸಂಪುಟ ಸಭೆ ಇದೆ. ಪರಭಾರೆ ತೀರ್ಮಾನ ಧೃಡಿಕರಣಕ್ಕೆ ಬರುತ್ತದೆ. ಅದನ್ನು ಧೃಡಿಕರಣ ಮಾಡಬಾರದು. ಒಂದು ಎಕರೆಗೆ 1 ಕೋಟಿ ಬೆಲೆ ಭೂಮಿ, ಕಡಿಮೆ ಬೆಲೆಗೆ ಮಾರಾಟ ಮಾಡಲು ಹೊರಟಿರುವುದು ಸರಿಯಲ್ಲ. ಯಡಿಯೂರಪ್ಪ ಕೊಡದಂತೆ ಅಹೋರಾತ್ರಿ ಹೋರಾಟ ಮಾಡಿದ್ದರು. ಈಗ ನೋಡಿದರೆ, ನೀವೇ ಅದನ್ನು ಮಾರಾಟ ಮಾಡಲು ಉತ್ಸುಕರಾಗಿದ್ದೀರಿ. ಇದನ್ನೆಲ್ಲಾ ನೋಡಿದರೆ, ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಎಂದು ವಿಶ್ವನಾಥ್ ವಿಷಾಧಿಸಿದರು.

jk

ರಾಜ್ಯದಲ್ಲಿ ಲಾಕ್‌ಡೌನ್ ವಿಚಾರ. ಜೂನ್ 7 ರ ನಂತರವೂ ಲಾಕ್‌ಡೌನ್ ಮುಂದುವರಿಕೆ. ಕೆಲ ಸಚಿವರ ಹೇಳಿಕೆಗೆ ಎಚ್ ವಿಶ್ವನಾಥ್ ಅಸಮಾಧಾನ. ಇದು ಸರಿಯಲ್ಲ ಸರಿಯಾದ ಪ್ಯಾಕೇಜ್ ಸಹಾ ಕೊಟ್ಟಿಲ್ಲ. ಈಗ ಜನ ಕೊರೊನಾದಿಂದ ಸಾಯುತ್ತಿದ್ದಾರೆ. ಆಮೇಲೆ ಸಮಸ್ಯೆಯಿಂದ ಸಾಯುತ್ತಾರೆ ಎಂದು ಎಚ್ಚರಿಸಿದರು.

ನಾಯಕತ್ವದ ಬದಲಾವಣೆ ಅಥವಾ ಉಳಿವಿಕೆ ವಿಷಯ ಹೈ ಕಮಾಂಡ್‌ಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ. ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದಿರಿ. ಇಬ್ಬರನ್ನು ಹಾಸಿಗೆ ಮಂತ್ರಿ ಮಾಡಿದಿರಿ. ಒಬ್ಬ ಆಕ್ಸಿಜನ್ ಮಂತ್ರಿ ಮಾಡಿದ್ರಿ. ಅದು ಸರಿಯಾಗಿ ಸಿಗುತ್ತಿಲ್ಲ. ಹೆಣದ ಮೇಲೆ ಹಣ ಎತ್ತಬೇಡಿ ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದ ಎಚ್ ವಿಶ್ವನಾಥ್.

mysore-dc-does-not-power-spend-10-paise-all-power-vijayendra-mlc-h-vishwanath

ತಜ್ಞರ ಮಾತನ್ನು ಸರ್ಕಾರ ಕೇಳಲೇ ಇಲ್ಲ ಸಚಿವ ಸಂಪುಟದಲ್ಲಿ ನಿಮ್ಮ ಇಷ್ಟ ಬಂದ ರೀತಿ ತೀರ್ಮಾನ, ಮತ್ತೆ ಲಾಕ್‌ಡೌನ್ ಮಾಡುವುದಾದರೆ ಪ್ರತಿಯೊಬ್ಬರಿಗೂ 10 ಸಾವಿರ ಕೊಟ್ಟು ಮಾಡಿ. ತೆವಲು ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ. ಮೈಸೂರಿನಲ್ಲಿ ಎಂ.ಎಲ್.ಸಿ ಎಚ್ ವಿಶ್ವನಾಥ್ ಒತ್ತಾಯ.

key words : mysore-bjp-vishwanath-pressmeet-covid-scandal