‘ ತಪ್ಪು ಮಾಡಿದ್ರವಿಗಷ್ಟೆ ಶಿಕ್ಷೆ ‘ ಸಾರಾಮ ಇರ್ಲಿ ಆರಾಮ : ಪೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ಕಾಲೆಳೆದ ಬಿಜೆಪಿ ಶಾಸಕ ನಾಗೇಂದ್ರ

Promotion

 

ಮೈಸೂರು, ಆ.21, 2019 : (www.justkannada.in news) : ಮಾಜಿ ಸಚಿವ, ಜೆಡಿಎಸ್ ಶಾಸಕ ಸಾ.ರ.ಮಹೇಶ್ ಅವರ ಬಳಿ ಪೋನ್ ಟ್ಯಾಪಿಂಗ್ ಗೆ ಸಂಬಂಧಿಸಿದತೆ ದಾಖಲೆಗಳಿದ್ರೆ ಬಿಡುಗಡೆ ಮಾಡಲಿ.ಅದನ್ನು ಸಹ ತನಿಖೆಗೆ ಒಳಪಡಿಸಲು ಆಗ್ರಹಿಸಲಾಗುವುದು ಎಂದು ಬಿಜೆಪಿ ಶಾಸಕ ಎಲ್.ನಾಗೇಂದ್ರ ಲೇವಡಿ ಮಾಡಿದ್ದಾರೆ.

ಪೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರಗಳ ಅವಧಿಯಲ್ಲಿನ ಬಗ್ಗೆಯೂ ತನಿಖೆ ಮಾಡಲಿ ಎಂದು ಬುಧವಾರ ಬೆಳಗ್ಗೆಯಷ್ಟೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಾ ರಾ ಮಹೇಶ್ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹೇಳಿದಿಷ್ಟು…

ಹಿಂದ ಸರ್ಕಾರವಿದ್ದಾಗ ಕುಮಾರಸ್ವಾಮಿ ವಿರೋದಿ ಪಾಳೆಯದಲ್ಲಿ ಇದ್ದರು. ಆಗ ಯಾಕೆ ಅವರು ಈ ಬಗ್ಗೆ ಒತ್ತಾಯ ಮಾಡಲಿಲ್ಲ. ಈಗ ಅವರ ಮೇಲೆ ಆರೋಪ ಬಂದ ಕೂಡಲೇ ಹಿಂದಿನದ್ದು ತನಿಖೆ ನಡೆಸಿ ಎಂದು ಕೇಳುತ್ತಿರುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದರು.
ಫೋನ್ ಟ್ಯಾಪಿಂಗ್ ನಡೆದಿರುವ ಬಗ್ಗೆ ಸ್ಪಷ್ಟವಾದ ಅನುಮಾ ಇರೋದ್ರಿಂದಲೆ ಸಿಬಿಐ ತನಿಖೆಗೆ ರಾಜ್ಯ ಸರಕಾರ ಆದೇಶಿಸಿರುವುದು. ಇಷ್ಟು ದಿನ ಅವರೇ (ಜೆಡಿಎಸ್-ಕಾಂಗ್ರೆಸ್) ಅಧಿಕಾರದಲ್ಲಿದ್ದರು. ಆಗ ಸಚಿವರು ಆಗಿದ್ದ ಸಾ. ರಾ ಮಹೇಶ್ ಯಾಕೆ ತನಿಖೆ ಮಾಡಿಸಲಿಲ್ಲ ಎಂದು ನಾಗೇಂದ್ರ ವ್ಯಂಗ್ಯವಾಡಿದರು.

ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೇಲೆ ಫೋನ್ ಕದ್ದಾಲಿಕೆಯ ನೇರ ಆರೋಪವಿದೆ. ಹಾಗಾಗಿ ತನಿಖೆ ಮಾಡಲಾಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಸತ್ಯಾಸತ್ಯತೆ ಹೊರಗೆ ಬರುತ್ತದೆ. ತಪ್ಪು ಮಾಡಿದ್ರೆ ಮಾತ್ರ ಕ್ರಮ ಆಗುತ್ತದೆ. ಅದಕ್ಕೆ ಸಾ.ರಾ ಮಹೇಶ ಯಾಕೆ ಬೇಸರ ವ್ಯಕ್ಯಪಡಿಸಬೇಕು ಎಂದು ಶಾಸಕ ಎಲ್ ನಾಗೇಂದ್ರ ಕಾಲೆಳೆದರು.

ಮೈಸೂರಿ ಭಾಗದ ನಾಯಕರಿಗೆ ಸಚಿವ ಸ್ಥಾನ ಇಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ನಾಗೇಂದ್ರ, ಮುಂದಿನ ಹಂತದಲ್ಲಿ ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡೊ ಭರವಸೆ ಇದೆ. ಈಗಷ್ಟೆ ಸರ್ಕಾರ ರಚನೆಯಾಗಿ 17 ಜನ ಮಾತ್ರ ಸಚಿವರಾಗಿದ್ದಾರೆ. ಹೈಕಾಮಂಡ್ ತೀರ್ಮಾನ ನಾವು ಪ್ರಶ್ನೆ ಮಾಡುವ ಹಾಗಿಲ್ಲ. ನಾಳಿನ ದಸರಾ ‌ಕಾರ್ಯಕ್ರಮ ಎಂದಿನಂತೆ ನಡೆಯಲಿದೆ. ಪಕ್ಷಾತೀತವಾಗಿ ದಸರಾ ಹಬ್ಬವನ್ನು ಮಾಡುತ್ತೇವೆ. ನಾನು ಕೂಡಾ ವೀರನ ಹೊಸಹಳ್ಳಿಯ ಗಜ ಪಯಣ ದಲ್ಲಿ ಭಾಗಿಯಾಗಲಿದ್ದೇನೆ ಎಂದರು.

key words : mysore-bjp-mla-naggendra-jds-.sa.ra.mahesh-dasara