ಮೈಸೂರಿನಲ್ಲಿ ಹಕ್ಕಿಜ್ವರವಿದ್ರೂ ‘ಶುಕವನ’ದ ಗಿಳಿಗಳಿಗಿಲ್ಲ ಯಾವುದೇ ಭಯ….

ಮೈಸೂರು,ಮಾ,18,2020(www.justkannada.in): ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಹೀಗಾಗಿ ಮೈಸೂರು ಜಿಲ್ಲಾಡಳಿತ ಪಕ್ಷಿಗಳ ಸರ್ವೇ ಕಾರ್ಯ ನಡೆಸಿ ಗುರುತಿಸಲಾದ ಪಕ್ಷಿಗಳನ್ನ ಕೊಲ್ಲಲಾಗುತ್ತಿದೆ. ಈ ನಡುವೆ ಮೈಸೂರಿನಲ್ಲಿ ಹಕ್ಕಿಜ್ವರ ಇದ್ದರೂ ಶುಕವನದ ಗಿಳಿಗಳಿಗಿಲ್ಲ  ಹಕ್ಕಿಜ್ವರದ ಭಯ..

ಮೈಸೂರಿನಲ್ಲಿ ಹಕ್ಕಿಜ್ವರ ಕಂಡು ಬಂದ ಹಿನ್ನೆಲೆ 4 ಸಾವಿರ ಗಿಳಿಗಳಿರುವ ಶುಕವನದಲ್ಲಿ ಭಾರಿ ಮುಂಜಾಗ್ರತೆ ವಹಿಸಲಾಗಿದೆ. ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶುಕವನದ ಗಿಳಿಗಳಿಗೆ ಹಣ್ಣು, ಆಹಾರ ನೀಡಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಲಹುತ್ತಿದ್ದಾರೆ.

ಗಿಳಿಗಳಿಗೆ ವೈರಸ್ ಹರಡದಂತೆ ಔಷಧಿ ಸಿಂಪಡಣೆ ಮಾಡಲಾಗುತ್ತಿದ್ದು ನಿತ್ಯ ಆಹಾರ ಜತೆಯಲ್ಲೇ ಔಷಧಿ ಸಿಂಪಡಿಸಲಾಗುತ್ತಿದೆ. ಪ್ರತಿವಾರ ಗಿಳಿಗಳಿಗೆ ಸ್ನಾನ ಮಾಡಿಸಿ ಶುಚಿತ್ವ ಕಾಪಾಡಲಾಗುತ್ತಿದ್ದು . ಮನೆಯಲ್ಲೂ ಎಲ್ಲರೂ ಹಕ್ಕಿ ಪಕ್ಷಿಗಳನ್ನು ಪ್ರೀತಿ  ಸಾಕಿ ಜೊತೆಗೆ ಜಾಗೃತಿ ವಹಿಸಿ ಎಂದು ಸಲಹೆ ನೀಡಿದೆ.

ಈ ಕುರಿತು ಮಾತನಾಡಿರುವ ಗಣಪತಿ ಸಚ್ಚಿದಾನಂದ ಶ್ರೀ,  ಮೂರು ಬಾರಿ ಮೈಸೂರಿನಲ್ಲಿ ಹಕ್ಕಿಜ್ವರ ಬಂದರೂ ಆಶ್ರಮದ ಗಿಳಿಗಳಿಗೆ ಏನೂ ಆಗಿಲ್ಲ. ಕಾರಣ ನಾವು ತೆಗದುಕೊಳ್ಳುವ ಮುಂಜಾಗ್ರತೆಯ ಕ್ರಮ. ನಿತ್ಯ ಗಿಳಿಗಳಿಗೆ ಡಿಸ್ ಇನ್‌ಫೆಕ್ಷನ್, ಇನ್ಯೂನ್ ಬೂಸ್ಟರ್, ಹಣ್ಣು, ಸೂರ್ಯಕಾಂತಿ ಬೀಜ, ಬಕ್ವಿಟ್, ಸೆರಲ್ಯಾಕ್, ಎಲಕ್ಟ್ರೋಲೈಟ್, ಸ್ಪಾರ್ಕ್ ಲಿಕ್ವಿಡ್, ಸೇರಿದಂತೆ ಹಲವು ಕ್ರಮಗಳಲ್ಲಿ ಜಾಗೃತಿ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

Key words: Mysore- bird flue- no fears –ganapathi sacchidananda ashram-birds.