ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು.

Promotion

ಮೈಸೂರು,ಫೆಬ್ರವರಿ7,2022(www.justkannada.in): ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರದಲ್ಲಿ ನಡೆದಿದೆ.

ತಿ.ನರಸೀಪುರ ಪಟ್ಟಣದ ಕಪಿಲಾ ನದಿ ಸೇತುವೆ ಮೇಲೆ ತಡರಾತ್ರಿ ಈ  ಘಟನೆ ನಡೆದಿದೆ.  ನರಸೀಪುರ ವಿನಾಯಕ ಕಾಲೋನಿ ನಿವಾಸಿ ಅಬ್ದುಲ್ ರಶೀದ್ (38)ಮೃತ ದುರ್ದೈವಿ. ಶ್ರೀರಂಗಪಟ್ಟಣ ಸನ್ಪ್ಯೂರ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಬ್ದುಲ್ ರಶೀದ್ ರಾತ್ರಿ ಕೆಲಸಕ್ಕೆ ತೆರಳುವ ವೇಳೆ  ಅಪರಿಚಿತ ವಾಹನ ಬೈಕ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.tractor-collision-bike-bike-rider-dies-on-the-spot-mysore

ಈ ಕುರಿತು ತಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-bike-accident -death