ಸ್ಯಾಂಡಲ್ ವುಡ್ ನಟನ ಜತೆ ‘ ಶ್ರೀನಿವಾಸ ಕಲ್ಯಾಣ ‘ ವಾಗುತ್ತಿರುವ ಮೈಸೂರಿನ ಜರ್ನಲಿಸ್ಟ್ ಯಾರು ಗೊತ್ತ…?

Promotion

 

ಮೈಸೂರು, ಜೂ.18, 2019 : (www.justkannada.in news) : ನಟ, ನಿರ್ದೇಶಕ ಶ್ರೀನಿ ಅಲಿಯಾಸ್ ಎಂಜಿ ಶ್ರೀನಿವಾಸ್ ಕಲ್ಯಾಣವಾಗುತ್ತಿದ್ದಾರೆ. ಮೈಸೂರು ಮೂಲದ ಪತ್ರಕರ್ತೆ ಶೃತಿ ಇಂದಿರ ಲಕ್ಷ್ಮೀನಾರಾಯಣ ಜತೆಗೆ ಜೂ. 30 ರಂದು ಸಪ್ತಪದಿ ತುಳಿಯುತ್ತಿದ್ದಾರೆ.

ಜೂ.30 ರಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ‘ಅಂಗಳ’ ದಲ್ಲಿ ಈ ಜೋಡಿ ಮದುವೆ ಸಮಾರಂಭ ನಡೆಯಲಿದೆ.

ಶ್ರೀನಿವಾಸ್ ‘ಟೋಪಿವಾಲಾ’ ಚಿತ್ರದ ಬಳಿಕ ‘ಶ್ರೀನಿವಾಸ ಕಲ್ಯಾಣ’ ಹಾಗೂ ‘ಬೀರ್ ಬಲ್’ ಚಿತ್ರಗಳಲ್ಲಿ ನಟನೆಯೊಂದಿಗೆ ನಿರ್ದೇಶನವನ್ನೂ ಮಾಡಿದರು. ಪ್ರಸ್ತುತ ‘ರಂಗನಾಯಕಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಪತ್ರಿಕೋಧ್ಯಮ ವ್ಯಾಸಂಗ ಮಾಡಿರುವ ಶೃತಿ, ಆನಂತರ ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಡಿಎನ್ಎ ಪತ್ರಿಕೆಗಳಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿದ್ದರು. ಬಳಿಕ ಕೆಲ ಕಾಲ ಬಿ.ಟಿವಿ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಆರಂಭದ ದಿನಗಳಲ್ಲಿ ಕೆಲಸ ಮಾಡಿದ್ದರು.

ಆನಂತರ ವೃತ್ತಿಯ ಹಾದಿ ಬದಲಿಸಿದ ಶೃತಿ, ಬೆಂಗಳೂರಿನಲ್ಲಿ ಸ್ವಂತ ಕಂಪನಿ ಆರಂಭಿಸಿದರು. ಜಾಹಿರಾತು ನಿರ್ಮಾಣ, ಕಿರುಚಿತ್ರ ತಯಾರಿಕೆ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು. ಈ ಸಂಸ್ಥೆಯಲ್ಲೇ ಶ್ರೀನಿವಾಸ್ ನಿರ್ದೇಶಕರಾಗಿ ಶೃತಿ ಸಾಹಸಕ್ಕೆ ಸಾಥ್ ನೀಡಿದ್ದರು. ಇಲ್ಲಿ ಕಳೆದ ಏಳೆಂಟು ವರ್ಷಗಳ ಒಡಾನಾಟವೇ ಇಬರಿಬ್ಬರ ನಡುವೆ ಪ್ರೀತಿ ಅಂಕುರಿಸಲು ಮೂಲ.
ಶೃತಿ ಅವರ ತಾಯಿ ಡಾ. ಆರ್. ಇಂದಿರಾ ಹೆಸರಾಂತ ಚಿಂತಕಿ, ಸಮಾಜಶಾಸ್ತ್ರಜ್ಞೆ, ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ.

key words : mysore based journalist shruti going to tied the knot with sandalwood actor srinivasa