ಕೆತ್ತನೆ ಮಾಡಿದ್ದ ದಂತ ಮಾರಾಟ ಮಾಡುತ್ತಿದ್ದ ಮೂವರ ಬಂಧನ:  ಒಂದು ಕಾರು, ಬೈಕ್  ವಶ…

ಮೈಸೂರು,ಡಿಸೆಂಬರ್,25,2020(www.justkannada.in): ಶ್ರೀ ಕೃಷ್ಣ ಸೇರಿದಂತೆ ವಿವಿಧ ದೇವರ ಚಿತ್ರ ಕೆತ್ತನೆ ಮಾಡಿ ಆನೆ ಮೂರು ದಂತವನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದು, ಆರೋಪಿಗಳಿಂದ ಒಂದು ಆಲ್ಟೋ ಕಾರು, ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.mysore-Arrested -trio -selling –carved- ivory-Seized –car- bike.

ಮೈಸೂರಿನ ನಾಯ್ಡುನಗರದ ಬಳಿ ಮೂವರು ಆನೆ ದಂತವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ, ಪರಿಶೀಲಿಸಿದಾಗ ಮಾರುತಿ ಆಲ್ಟೋ ಕಾರ್‍ನಲ್ಲಿ ಕೆತ್ತನೆ ಮಾಡಿರುವ ಆನೆಯ ಮೂರು ದಂತ ಇರುವುದು ಖಚಿತವಾಗಿದೆ. ಕೂಡಲೇ ಕಾರ್‍ ನಲ್ಲಿದ್ದ ಮೈಸೂರಿನ ನಾಯ್ಡು ನಗರದ ನಿವಾಸಿಗಳಾದ ಮನೋಹರ್(40), ಸುಮಂತ್(26) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಶಿವದಾಸ್(55) ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಮಾರುತಿ ಆಲ್ಟೋ ಕಾರ್(ಕೆಎ.02, ಎಂಬಿ.0577) ಮತ್ತು ಒಂದು ಬೈಕ್(ಕೆಎ.12, ಹೆಚ್.8233) ವಶಪಡಿಸಿಕೊಂಡಿದ್ದಾರೆ.mysore-Arrested -trio -selling –carved- ivory-Seized –car- bike.

ಆಕರ್ಷಕ ಕೆತ್ತನೆ: ಆರೋಪಿಗಳ ಬಳಿ ಇದ್ದ ಆನೆಯ ಮೂರು ದಂತಗಳ ಮೇಲೆ ಆಕರ್ಷಕವಾಗಿ ಕೆತ್ತನೆ ಮಾಡಲಾಗಿದೆ. ಕೆತ್ತನೆಯಲ್ಲಿ ಪರಿಣಿತರಾಗಿರುವ ಕಲಾವಿದರೇ ಕೆತ್ತನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಎರಡು ದಂತಗಳು ಅಂದಾಜು ಒಂದೂವರೆ ಅಡಿ ಎತ್ತರದ್ದಾಗಿದ್ದರೆ, ಮತ್ತೊಂದು ಒಂದು ಅಡಿ ಎತ್ತರವಿದೆ. ಚಿಕ್ಕ ದಂತವನ್ನು ಪೀಠದ ಮೇಲೆ ನಿಂತು ಕೊಳಲು ಊದುತ್ತಿರುವ ಕೃಷ್ಣನ ಮೂರ್ತಿಯಾಗಿ ಪರಿವರ್ತಿಸಲಾಗಿದೆ. ಉಳಿದ ಎರಡೂ ದಂತವನ್ನು `ತ್ರಿಡಿ’ ಮಾದರಿಯಲ್ಲಿ ಪೌರಾಣಿಕ ಹಿನ್ನೆಲೆ ಸಾರುವಂತೆ ವಿವಿಧ ಬಂಗಿಯಲ್ಲಿರುವ ದೇವರ ಚಿತ್ರ ಕೆತ್ತನೆ ಮಾಡಲಾಗಿದೆ.mysore-Arrested -trio -selling –carved- ivory-Seized –car- bike.

Key words: mysore-Arrested -trio -selling –carved- ivory-Seized –car- bike.