ಆನ್‌ಲೈನ್ ಮೂಲಕ ಮಟ್ಕಾ ದಂಧೆಯಲ್ಲಿ ತೊಡಗಿದ್ದ ನಾಲ್ವರ ಬಂಧನ…

Promotion

ಮೈಸೂರು,ಮಾ,13,2020(www.justkannada.in): ಆನ್‌ಲೈನ್ ಮೂಲಕ ಮಟ್ಕಾ ದಂಧೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನ ಮೈಸೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸೇಂಟ್ ಮೇರಿಸ್ ರಸ್ತೆ, 7ನೇ ಕ್ರಾಸ್, ಎನ್.ಆರ್.ಮೊಹಲ್ಲಾದ ಎ.ಜಿ ಬ್ಲಾಕ್‌ನಲ್ಲಿರುವ ನಯಾಜ್ ಟೀ ಸ್ಟಾಲ್ ಬಳಿ ಮತ್ತು ಮಂಡಿ ಮೊಹಲ್ಲಾದ ಚಿಕ್ಕ ಮಾರ್ಕೆಟ್ ಬಳಿ ದಾಳಿ ಮಾಡಿ ಅಲ್ಲಿ ಅಕ್ರಮವಾಗಿ ಆನ್‌ಲೈನ್ ಮೂಲಕ ಮೂಡಿ ಬರುವ ಮಟ್ಕಾ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಹ್ಮದ್ ಉಮರ್ ಬಿನ್ ಮಹಮದ್ ಜಾಫರ್ (60) ಎ.ಜಿ.ಬ್ಲಾಕ್ ಎನ್ ಆರ್ ಮೊಹಲ್ಲಾ, ಮಹ್ಮದ್ ನಯಾಜ್ ಬಿನ್ ಟಿ.ಕೆ.ಮಹ್ಮದ್, (41 ), ರಾಜೀವ್ ನಗರ,  ಇನಾಯತ್ ಖಾನ್ ಘೋರಿ ಬಿನ್ ಅಹ್ಮದ್ ಖಾನ್ ಘೋರಿ( 61), ಉದಯಗಿರಿ,   ಮಹ್ಮದ್ ಜಮೀಲ್ ಬಿನ್ ಮಹ್ಮದ್ ಸನಾವುಲ್ಲಾ, (47 ), ಕೆ.ಎನ್.ಪುರ, ಎಂದು ಗುರುತಿಸಲಾಗಿದೆ.

ಇವರನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟ ದಂದೆಯಲ್ಲಿ ತೊಡಗಿಸಿಕೊಂಡಿದ್ದ 38,780ರೂ.ಹಣ, ನಾಲ್ಕು ಮೊಬೈಲ್ ಫೋನ್ ಗಳು ಹಾಗೂ ಮಟ್ಕಾ ಆಟದ ಕುರಿತು ಬರೆಯಲಾಗಿದ್ದ ಚೀಟಿ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಮತ್ತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಡಿ.ಸಿ.ಪಿ ಡಾ. ಎ.ಎನ್.ಪ್ರಕಾಶ್ ಗೌಡ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ವಿ.ಮರಿಯಪ್ಪ  ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸಪೆಕ್ಟರ್ ಎ.ಮಲ್ಲೇಶ, ಎ.ಎಸ್.ಐ. ಆರ್.ರಾಜು, ಸಿಬ್ಬಂದಿಗಳಾದ ಜೋಸೆಫ್ ನೊರೋನ, ಶ್ರೀನಿವಾಸ್ ಪ್ರಸಾದ್, ದೀಪಕ್, ಶ್ರೀನಿವಾಸ್.ಕೆ.ಜಿ, ಪುರುಷೋತ್ತಮ್, ರಾಜಶ್ರೀ ಜಾಲವಾದಿ ಹಾಗೂ ವಿ.ರಘು ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆದಿದೆ.

Key words: mysore- arrest -four persons – Matka dande- raid