ನಿಂದಿಸಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿ ಹೀಗಾ ಮಾಡೋದು…..?

Promotion

ಮೈಸೂರು,ಮೇ,,29,2020(www.justkannada.in): ಕೇವಲ ನಿಂದಿಸಿದ್ದಕ್ಕೆ ವ್ಯಕ್ತಿಯೊರ್ವ ಕೋಪಗೊಂಡು ಮತ್ತೊಬ್ಬ ವ್ಯಕ್ತಿ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಿಳಿಕೆರೆ ಗ್ರಾಮದ ಕಾಳಪ್ಪ ನಾಯಕ್ (35) ಮೇಲೆ ಬಿಳಿಕೆರೆ ನಿವಾಸಿ ಚಂದ್ರಶೇಖರ ಚಾರಿ (40) ಆಸಿಡ್ ದಾಳಿ ನಡೆಸಿದ್ದು ಈತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಳಪ್ಪ ನಾಯಕ  ನಿಂದಿಸಿದ್ದಕ್ಕೆ ಸಿಟ್ಟಿಗೆದ್ದ ಚಂದ್ರಶೇಖರ ಚಾರಿ ಆಸಿಡ್ ದಾಳಿ ನಡೆಸಿದ್ದು, ಕಾಳಪ್ಪನಾಯಕನ ಮುಖದ ಬಲ ಭಾಗ, ಕಿವಿ ಹಾಗೂ ಬೆನ್ನಿನಲ್ಲಿ ಗಾಯವಾಗಿದೆ. ಇದೀಗ ಕಾಳಪ್ಪ ನಾಯಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- Acid- Abuse- police-arrest