ಮೇ 22 ರಂದು 3ನೇ ವರ್ಷದ ಕರ್ನಾಟಕ ಯುವ ಅಂತರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು ಮೈಸೂರು ಅಂತರಾಷ್ಟ್ರೀಯ ಜಲ ಚಲನಚಿತ್ರೋತ್ಸವ.

ಮೈಸೂರು,ಮೇ,19,2022(www.justkannada.in): ಫಿಲ್ಮಾಹಾಲಿಕ್ ಫೌಂಡೇಶನ್ ವತಿಯಿಂದ ಮೇ 22 ರಂದು 3ನೇ ವರ್ಷದ ಕರ್ನಾಟಕ ಯುವ ಅಂತರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು ಮೈಸೂರು ಅಂತರಾಷ್ಟ್ರೀಯ ಜಲ ಚಲನಚಿತ್ರೋತ್ಸವವನ್ನ ಆಯೋಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ  ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥಾಪಕ ಆರ್.ಎ ಆದಿತ್ಯ,  ಮೈಸೂರಿನ ನಟನ ರಂಗಮಂದಿರದಲ್ಲಿ ಮೇ 22 ರಂದು  9:30 AM ರಿಂದ 7:30 PM ವರೆಗೆ ಕಾರ್ಯಕ್ರಮ ನಡೆಯಲಿದೆ. ಈ 3ನೇ ವರ್ಷದ ಕರ್ನಾಟಕ ಯುವ ಅಂತರಾಷ್ಟ್ರೀಯ ಕಿರುಚಿತ್ರೋತ್ಸವ ಮತ್ತು ಮೈಸೂರು ಅಂತರಾಷ್ಟ್ರೀಯ ಜಲ ಚಲನಚಿತ್ರೋತ್ಸವ ಮುಖ್ಯ ಉದ್ದೇಶ ಹೊಸ ತಲೆಮಾರಿನ ಚಲನಚಿತ್ರ ತಯಾರಕರಿಗೆ ಕಲಾತ್ಮಕ ಸೃಜನಶೀಲತೆಯನ್ನು ಪೋಷಿಸಿ ಮತ್ತು ಉತ್ತೇಜಿಸಿ ಅವರ ಚಲನಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸುವುದು. 91 ಕ್ಕೂ ಹೆಚ್ಚು ದೇಶಗಳ ಚಲನಚಿತ್ರ ತಯಾರಕರು ಭಾಗವಹಿಸಿದ್ದಾರೆ ಮತ್ತು ಚಲನಚಿತ್ರೋತ್ಸವಕ್ಕೆ 2000 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಸಲ್ಲಿಸಿದ್ದಾರೆ. ಈ ಸಂಸ್ಥೆಯ ಉದೇಶ, ವಿದ್ಯಾರ್ಥಿಗಳು, ಚಲನಚಿತ್ರ ತಯಾರಕರು ಮತ್ತು ಯುವಕರು ಮಾಡಿರುವ ಅತ್ಯುತ್ತಮ ಚಲನಚಿತ್ರಗಳನ್ನು ಆಕರ್ಷಿಸುವುದು ಮತ್ತು ಅದನ್ನು ಪ್ರದರ್ಶಿಸುವುದು ಎಂದು ತಿಳಿಸಿದರು.

ಈ ಉತ್ಸವವು ಸಾರ್ವಜನಿಕರಿಗೆ ಶಿಕ್ಷಣ ನೀಡುತ್ತದೆ, ಚಲನಚಿತ್ರಗಳ ವರ್ಗಕ್ಕೆ ಬಳಸುವ ವಿವಿಧ ವಿಷಯಗಳನ್ನು ತಿಳಿಸುತ್ತದೆ, ಹಿಂಸೆ, ತಾರತಮ್ಯ ಮತ್ತು ವರ್ಣಭೇದ ನೀತಿಯ ವಿರುದ್ಧ ವಿದ್ಯಾರ್ಥಿಗಳು ಮತ್ತು ಯುವಕರ ಹಕ್ಕುಗಳ ಬಗ್ಗೆ ವಿಷಯ ಮುಟ್ಟಿಸುತ್ತೆ. ಈ ನಿಟ್ಟಿನಲ್ಲಿ ಸೃಜನಶೀಲ ಪ್ರತಿಭೆಯನ್ನು ಉತ್ತೇಜಿಸಲು ಮತ್ತು ಹೊರತರುವಂತೆ ಸಂದೇಶಗಳನ್ನು ಕಲ್ಪಿಸಿ ಕೊಡಲಾಗುವುದು. ಅವುಗಳನ್ನು ಚಲನಚಿತ್ರ ತಯಾರಿಕೆಗೆ ಹೇಗೆ ಬಳಸಬಹುದು ಎಂಬುದನ್ನು ತಿಳಿಯಬಹುದು. ನೀರನ್ನು ಉಳಿಸುವ ಬಗ್ಗೆ ಅರಿವು ಮತ್ತು ನೀರನ್ನು ಹೇಗೆ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಮತ್ತು ಅದನ್ನು ವ್ಯರ್ಥ ಮಾಡಬಾರದು ಎಂಬ ಸಂದೇಶಗಳನ್ನು ಕಲ್ಪಿಸಿ ಕೊಡಲಾಗುವುದು.

ಚಲನಚಿತ್ರೋತ್ಸವಕ್ಕೆ ನಾವು ಚಿತ್ರೋದ್ಯಮದವರನ್ನು ಮತ್ತು ಸರ್ಕಾರಿ ಅಧಿಕಾರಿಗಳನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದೇವೆ. ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಂತರ ಆಯ್ಕೆ ಮಾಡಲಾದ ಕಿರುಚಿತ್ರಗಳ ಪ್ರದರ್ಶನ ಚಲನಚಿತ್ರ ಮಾಡುವುದರ ಚರ್ಚೆ ಹಾಗೂ ಪ್ರಶಸ್ತಿ ಮತ್ತು ಸನ್ಮಾನ ಸಮಾರಂಭ ನಟನ ರಂಗಮಂದಿರ, ಮೈಸೂರು ನಡೆಯುತ್ತದೆ.

ಆದಿತ್ಯ.ಆರ್.ಎ ಮತ್ತು ಕಿಶೋರ್.ಬಿ.ಎಸ್ ಆದ ನಾವು 2017 ರಲ್ಲಿ ಫಿಲ್ಮಾ ಹಾಲಿಕ್ ಫೌಂಡೇಶನ್ ಸಂಸ್ಥೆಯನ್ನು ಪ್ರಾರಂಭಿಸಿದವು, ಈ ಸಂಸ್ಥೆಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಅದರಲ್ಲಿ ಭಾರತೀಯ ಚಿತ್ರರಂಗ, ರಂಗಭೂಮಿ, ಕಲೆ, ವಿದ್ಯಾಭ್ಯಾಸ, ಕ್ರೀಡೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು, ಯುವಕರು, ಮಕ್ಕಳು, ಮಹಿಳೆಯರು, ಬಡ ರೈತರು, ಪರಿಸರಕ್ಕೆ ಸಂಬಂಧಿಸಿದ ಜಾಗೃತಿ ಮತ್ತು ಕಾರ್ಯಕ್ರಮಗಳನ್ನು ರಚಿಸುವುದು, ಮಣ್ಣು, ನೀರು, ಆರೋಗ್ಯ, ನಿರ್ಮಲ ನಗರ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.

ಮುಂಬರುವ ದಿನಗಳಲ್ಲಿ ನಾವು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಿರ್ದಿಷ್ಟ ವಿಷಯಗಳೊಂದಿಗೆ ಚಲನಚಿತ್ರೋತ್ಸವವನ್ನು ನಡೆಸಲು ಯೋಜಿಸುತ್ತಿದ್ದೇವೆ.  ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ವೇದಿಕೆ ನೀಡಲು, ಜನರನ್ನು ಸಬಲೀಕರಣಗೊಳಿಸುವ ಇತರ ಚಟುವಟಿಕೆಗಳು ಹಮ್ಮಿಕೊಳ್ಳುತ್ತೇವೆ. ಈಗಾಗಲೇ ಬೆಂಗಳೂರು ಮೈಸೂರು ಮಂಡ್ಯದಲ್ಲಿ ಚಲನಚಿತ್ರೋತ್ಸವಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ ಎಂದು ಆದಿತ್ಯ ಅವರು ತಿಳಿಸಿದ್ದಾರೆ.

Key words: mysore- 3rd Karnataka –Youth- International -Short Film -Festival