ಪದವಿ ಪೂರ್ವ ಶಿಕ್ಷಣ,  ಎನ್ಇಪಿ ಅಥವಾ ಎಸ್ಇಪಿ ಅಳವಡಿಕೆ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.

mysore ̲ education ̲ budget ̲ reaction ̲ gss ̲ Anupama ̲ pandith

Promotion

 

ಮೈಸೂರು, ಫೆ.೦೯, ೨೦೨೪ : (justkannada in news) ಸದ್ಯದಲ್ಲೇ ರಾಜ್ಯದ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರಕಾರ ಆಧ್ಯತೆ ನೀಡಬೇಕಾಗಿರುವ ಕೆಲ ಅಂಶಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ  ಗೀತಾ ಶಿಶು ಶಿಕ್ಷಣ ಸಂಸ್ಥೆ (GSSS)́ ಆಡಳಿತಾಧಿಕಾರಿ ಅನುಪಮ ಪಂಡಿತ್  ʼ ಜಸ್ಟ್‌ ಕನ್ನಡ ́ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಯುವಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲವನ್ನ ನೀಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದಿಂದ ಕ್ಲಾರಿಟಿ ಸಿಗಬೇಕಿದೆ. ಪದವಿ ಪೂರ್ವ ಶಿಕ್ಷಣದಲ್ಲಿ ಎನ್ಇಪಿ ಅಥವಾ ಎಸ್ಇಪಿ ಅಳವಡಿಕೆ ಬಗ್ಗೆ ಸ್ಪಷ್ಟ ಪಡಿಸಬೇಕಿದೆ.

ಯುವಕರಿಗೆ ಇಷ್ಟೊಂದು ಸ್ಕೀಮ್ ನೀಡಿ ಅದರ ಸದುಪಯೋಗಪಡಿಸಕೊಳ್ಳದಿದ್ದರೆ ಇದು ದುಃಖಕರ ವಿಚಾರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಜಿನಿಯರ್ ಮತ್ತು ವೈದ್ಯಕೀಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು. ಕೋರ್ಸ್‌ ಗೆ ಸೇರುವಾಗ ಸಮಗ್ರ ಮಾಹಿತಿ ನೀಡುವ ಅಗತ್ಯವಿದೆ. ಈ  ನಿಟ್ಟಿನಲ್ಲಿಸರಕಾರವೇ   ʼ ಹೆಲ್ಪ್ ಸೆಂಟರ್ ʼ ಗಳನ್ನು ಆರಂಭಿಸಬೇಕು.

ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು. ತಂತ್ರಜ್ಞಾನ ದಿನೇದಿನೆ ಅಭಿವೃದ್ಧಿ ಹೊಂದುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಸಹ ಅದಕ್ಕೆ ಅನುಗುಣವಾಗಿ ಜ್ಞಾನವೃದ್ಧಿಸಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ಸರಕಾರ ಶಿಕ್ಷಕರ ತರಬೇತಿ ಸಂಸ್ಥೆಗಳನ್ನ ಆದುನಿಕರಿಸಬೇಕು. ಜತೆಗೆ ಶಿಕ್ಷಕರಿಗೂ ನಿಗಧಿತ ಸಮಯದಲ್ಲಿ ಒರಿಯೆಂಟೇಷನ್‌ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸಿ ಅದನ್ನು ಜಾರಿಗೊಳಿಸಬೇಕು.

Key words : mysore ̲ education ̲ budget ̲ reaction ̲ gss ̲ Anupama ̲ pandith