ನನ್ನ ದೆಹಲಿ ಪ್ರವಾಸ ಯಶಸ್ವಿ- ಬೆಂಗಳೂರಿಗೆ ವಾಪಸ್ ಆಗಿ ಸಿಎಂ ಬಿಎಸ್ ವೈ ಹೇಳಿಕೆ…

Promotion

ಬೆಂಗಳೂರು,ಸೆಪ್ಟಂಬರ್,19,2020(www.justkannada.in): ರಾಜ್ಯದ ಹಲವು ವಿಚಾರ ಹಾಗೂ ಸಂಪುಟ ವಿಸ್ತರಣೆ ಕುರಿತು ಪ್ರಧಾನಿ ಮೋದಿ ಮತ್ತು ಪಕ್ಷದ ಹೈಕಮಾಂಡ್ ಜತೆ ಚರ್ಚಿಸಲು ದೆಹಲಿಗೆ ತೆರಳಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.jk-logo-justkannada-logo

ದೆಹಲಿ ಪ್ರವಾಸದಲ್ಲಿದ್ದ ಸಿಎಂ ಸಿಎಸ್‌ವೈ ಸಧ್ಯ ರಾಜ್ಯಕ್ಕೆ ಮರಳಿದ್ದು, ನನ್ನ ದೆಹಲಿ ಪ್ರವಾಸ ಸಂಪೂರ್ಣ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಿಎಸ್  ಯಡಿಯೂರಪ್ಪ, ರಾಜ್ಯದ ಸಮಸ್ಯೆ ಕುರಿತು ಪ್ರಧಾನಿ ಮೋದಿಯವರೊಂದಿಗೆ ಚರ್ಚೆ ನಡೆಸಿದ್ದೇನೆ. ಇನ್ನು ಒಂದು ಶಬ್ದದಲ್ಲಿ ಹೇಳಬೇಕಾದರೇ ನನ್ನ ದೆಹಲಿ ಪ್ರವಾಸ ಯಶಸ್ವಿಯಾಗಿದೆ’ ಎಂದು ತಿಳಿಸಿದರು.my-delhi-tour-success-cm-bs-yeddyurappa-bangalore

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸಿಎಂಬಿಎಸ್ ಯಡಿಯೂರಪ್ಪ,  ಸಂಪುಟ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಅವರ ಜತೆ ಚರ್ಚಿಸಿದ್ದೇನೆ. ಜೆ.ಪಿ ನಡ್ಡಾ ಅವರ ಜತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ಸಂದೇಶಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದರು.

 

Key words: My -Delhi -tour – success-CM BS Yeddyurappa -Bangalore.