ಗೂಂಡಾಗಿರಿ ಮಾಡುವ ಮುಸಲ್ಮಾನರನ್ನು ಮುಸಲ್ಮಾನ್ ಗೂಂಡಾಗಳು ಎಂದು ಕರೆಯುತ್ತೇನೆ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

Promotion

ಮೈಸೂರು, ಅಕ್ಟೋಬರ್,10,2023(www.justkannada.in): ಶಿವಮೊಗ್ಗ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಗೂಂಡಾಗಿರಿ ಮಾಡುವ ಮುಸಲ್ಮಾನರನ್ನು ಮುಸಲ್ಮಾನ್ ಗೂಂಡಾಗಳು ಎಂದು ಕರೆಯುತ್ತೇನೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ,  ಗುಂಡೇಟು ತಿಂದ ಗೂಂಡಾಗಳೆಲ್ಲಾ ಜೈಲಿನಲ್ಲಿದ್ದಾರೆ. ಮುಸಲ್ಮಾನ್ ಗೂಂಡಾಗಳು ಅಂತ ಎಲ್ಲರಿಗೂ ಹೇಳುವುದಿಲ್ಲ. ಆದರೆ ಆರು ಮಂದಿ ಪೊಲೀಸರ ಮೇಲೆ ಹಲ್ಲೆ‌ ಮಾಡಿದವರನ್ನು ಹಾಗೆ ಕರೆಯುತ್ತೇನೆ. ಖುದ್ದು ಎಸ್ ಪಿ ಮೇಲೂ ಕೂಡ ಹಲ್ಲೆ ನಡೆಸಿದ್ದಾರೆ. ಹಿಂದೂ‌ ಹೆಣ್ಣುಮಕ್ಕಳು ಕಣ್ಣೀರು ಹಾಕಿಕೊಂಡು‌ ಹೇಳಿದರು. ಎಸ್ ಪಿ ಸುಳ್ಳು ಹೇಳಿ ಸರ್ಕಾರದ ಮರ್ಯಾದೆ ಉಳಿಸಿದರು. ಮುಸಲ್ಮಾನ ಗೂಂಡಾಗಳು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಇವರ ಆಟ ನಡೆಯಬಹುದು. ಹಿಂದೂಸ್ತಾನದಲ್ಲಿ ಇವರ ಆಟ ನಡೆಯುವುದಿಲ್ಲ ಎಂದು ಕಿಡಿಕಾರಿದರು.

ಚಾಮುಂಡಿ ಬೆಟ್ಟದಲ್ಲಿ ಮಹಿಷ‌ ದಸರಾ ಆಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಯಾಗ-ಯಜ್ಞಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಕ್ಷಸರ ಹೆಸರು ಇತಿಹಾಸದಲ್ಲಿ ಉಳಿದಿಲ್ಲ. ರಾಮ, ಲಕ್ಷ್ಮಣ, ಲವರ ಹೆಸರು ಉಳಿದಿದೆ. ಈ ದೇಶದಲ್ಲಿ ಸನಾತನ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

Key words: Muslims – hooliganism  – Former Minister -KS Eshwarappa