ಮುಡಾಗೆ ಸಂಬಂಧಪಟ್ಟ ವಾಹನಗಳ ಜಪ್ತಿಗೆ ಕೋರ್ಟ್ ಆದೇಶ: ಮುಡಾ ಆಯುಕ್ತರ ಕಾರು ಸೀಜ್…

Promotion

ಮೈಸೂರು,ಜನವರಿ,28,2021(www.justkannada.in):  ಭೂ ಸ್ವಾಧೀನಕ್ಕೆ ರೈತರಿಗೆ ಹೆಚ್ಚುವರಿ ಪರಿಹಾರ ನೀಡುವಲ್ಲಿ ವಿಳಂಬ ಹಿನ್ನೆಲೆಯಲ್ಲಿ  ಮುಡಾಗೆ ಸಂಬಂಧಪಟ್ಟ ವಾಹನಗಳನ್ನು ಜಪ್ತಿ ಮಾಡುವಂತೆ ನಾಲ್ಕನೇ ಎಸಿಜೆ ನ್ಯಾಯಾಲಯ ಆದೇಶ ಹೊರಡಿಸಿದೆ. jk

ದಶಕಗಳ ಹಿಂದೆ ಲೇ ಔಟ್ ನಿರ್ಮಾಣಕ್ಕೆ ರೈತರ ಜಮೀನನ್ನು ಮುಡಾ ಭೂ ಸ್ವಾಧೀನ ಮಾಡಿಕೊಂಡಿತ್ತು. ಈ ಮಧ್ಯೆ  ಭೂ ಸ್ವಾಧೀನಕ್ಕೆ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ನಾಲ್ಕನೇ ಎಸಿಜೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಭೂ ಸ್ವಾಧೀನಕ್ಕೆ ಹೆಚ್ಚುವರಿ ಪರಿಹಾರ ನೀಡುವಲ್ಲಿ ವಿಳಂಬ  ಮಾಡಿದ್ದು ಈ ಹಿನ್ನೆಲೆಯಲ್ಲಿ ಮುಡಾಗೆ ಸಂಬಂಧಪಟ್ಟ ವಾಹನಗಳನ್ನು ಜಪ್ತಿ ಮಾಡುವಂತೆ ನಾಲ್ಕನೇ ಎಸಿಜೆ ನ್ಯಾಯಾಲಯ ಆದೇಶಿಸಿದೆ.Muda- vehicles- confiscation-court –order- Muda Commissioner's-Car Siege ...

ಆಯುಕ್ತರ ಕಾರ್ ಸೇರಿದಂತೆ ಪ್ರಾಧಿಕಾರದ ಎರಡು ಕಾರ್ ಗೆ ಅಮೀನರು ನೋಟೀಸ್ ಪ್ರತಿ ಅಂಟಿಸಿದ್ದು ಈ ಮೂಲಕ ಮುಡಾ ಆಯುಕ್ತರ ಕಾರ್ ಅನ್ನ ಸೀಜ್ ಮಾಡಲಾಗಿದೆ.  ಅರ್ಜಿದಾರರ ಪರ ವಕೀಲರು ಆದೇಶದ ಪ್ರತಿ ಹಿಡಿದು ಮುಡಾ ಆವರಣದಲ್ಲೇ ಇದ್ದಾರೆ ಎನ್ನಲಾಗಿದೆ.

Key words: Muda- vehicles- confiscation-court –order- Muda Commissioner’s-Car Siege …