ಅಪರೇಷನ್ ಕಮಲಗೆ ಬಿಜೆಪಿಗೆ ಎಂಟಿಬಿ ಸಾಲ ನೀಡಿದ್ದಾರೆ- ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ  ಟಾಂಗ್…

Promotion

ಮೈಸೂರು,ನ,21,2019(www.justkannada.in):  ಅಪರೇಷನ್ ಕಮಲದಲ್ಲಿ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ. ಬದಲಾಗಿ ಅವರೇ ನೀಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಅಪರೇಷನ್ ಕಮಲಗೆ ಹಣ ನೀಡಿದ್ದಕ್ಕೆ ಎಂಟಿಬಿ ನಾಗರಾಜ್ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪಗೆ ಪ್ರೀತಿ. ಹೀಗೆ ಮಾಡಿರೋದು ಎಂಟಿಬಿ ನಾಗರಾಜ್ ಒಬ್ಬನೇ ಎಂದು ಲೇವಡಿ ಮಾಡಿದರು.

ನಾನು ಎಂಟಿಬಿ ನಾಗರಾಜ್ ಬಳಿ ಸಾಲವನ್ನ ಪಡೆದಿಲ್ಲ. ಹೀಗಾಗಿ ನಾನು ಸಾಲ ಪಡೆಯದೇ ಏನ್ ವಾಪಸ್ ನೀಡಲಿ. ಕೃಷ್ಣೇಭೈರೇಗೌಡ ಪಡೆದಿದ್ದ ಸಾಲವನ್ನ ವಾಪಸ್ ನೀಡಿದ್ದಾರೆ ಎಂದು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.

ಇದೇ ವೇಳೆ ಅನರ್ಹ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಹಣದಾಸೆಗೆ ಅನರ್ಹ ಶಾಸಕರು ಹೋಗಿದ್ದಾರೆಂದು ಜನ ಚರ್ಚಿಸುತ್ತಿದ್ದಾರೆ.  ಪ್ರಚಾರದ ವೇಳೆ ನಾನು ಬರೀ ಪ್ರಶ್ನೆಗಳನ್ನೇ ಕೇಳುತ್ತೇನೆ. ಜನರಿಗೆ ಗೊತ್ತಿದೆ. ಅವರು ಉತ್ತರಿಸುತ್ತಿದ್ದಾರೆ. ಅನರ್ಹರನ್ನ ಜನ ಸಹಿಸಲ್ಲ. ಸೋಲಿಸುತ್ತಾರೆ.  ಇವರ ವಿನಯದ ಸುಳ್ಳನ್ನ ಜನ ನಂಬಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

ಕಾಂಗ್ರೆಸ್ ನಾಯಕರು ನನ್ನ ಬಳಿ ಸಾಲ ಪಡೆದಿದ್ದಾರೆ. ನಾನು ಅವರ ಋಣದಲ್ಲಿಲ್ಲ. ಅವರು ನನ್ನ ಋಣದಲ್ಲಿದ್ದಾರೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದರು.

Key words: MTB  nagaraj-money- BJP – Operation kamala-Former CM -Siddaramaiah – Mysore.