ನನಗೆ ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುವೆ : ಹೈಕಮಾಂಡ್ ನಿರ್ಧಾರಕ್ಕೆ ಬದ್ಧ- ಸಿಎಂ ಬಿಎಸ್ ವೈ ಭೇಟಿ ಬಳಿಕ ಎಂಟಿಬಿ ನಾಗರಾಜ್ ಹೇಳಿಕೆ…

Promotion

ಬೆಂಗಳೂರು,ಜ,17,2020(www.justkannada.in): ಸಿಎಂ ಬಳಿ ಸಚಿವ ಸ್ಥಾನದ ಬಗ್ಗೆ ಏನು ಮಾತನಾಡಿಲ್ಲ. ಸಚಿವ ಸ್ಥಾನ ನೀಡದಿದ್ರೂ ಪರವಾಗಿಲ್ಲ.  ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ಇಂದು ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಎಂಟಿಬಿ ನಾಗರಾಜ್,  ಸಿಎಂ ಬಳಿ ಸಚಿವ ಸ್ಥಾನದ ಬಗ್ಗೆ ಏನು ಮಾತನಾಡಿಲ್ಲ. ಬಿಎಸ್ ವೈಗೆ  ಈಗ ಇರುವ ಒತ್ತಡ ಸಾಕು. ಬಿಎಸ್ ವೈಗೆ ನಾವು ಯಾವುದೇ ಒತ್ತಡ ಹಾಕಲ್ಲ  ನನಗೆ ಯಾವುದೇ ಸಚಿವ ಸ್ಥಾನ ನೀಡದಿದ್ದರೂ ಪರವಾಗಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಸಮಯ ನೋಡಿಕೊಂಡು ಬಿಎಸ್ ವೈ ಸಂಪುಟ ವಿಸ್ತರಣೆ ಮಾಡ್ತಾರೆ.  ನನಗೆ ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುವೆ ಎಂದು ತಿಳಿಸಿದರು.

ಮೊದಲು ನನಗೆ ಟಿಕೆಟ್ ನೀಡಲು ಶರತ್ ಬಚ್ಚೇಗೌಡ ಒಪ್ಪಿಗೆ ನೀಡಿದ್ರು. ನಂತರ ನನ್ನ ವಿರುದ್ದ ಸ್ಪರ್ಧಿಸಿದರು.ಇದರಿಂದಾಗಿ ನನಗೆ ಹಿನ್ನೆಡೆಯಾಗಿದೆ. ಸೋಲಾಗಿಲ್ಲ. ಚುನಾವಣೆ ಮುಗಿದ ದಿನದಿಂದಲೂ ಸಂಸದ ಬಚ್ಚೇಗೌಡರ ವಿರುದ್ದ ಕ್ರಮಕ್ಕೆ ಬಿಎಸ್ ಯಡಿಯೂರಪ್ಪ ಬಳಿ ಮನವಿ ಮಾಡುತ್ತಿದ್ದೇನೆ. ಅದರೆ ಈ ಬಗ್ಗೆ ಸಿಎಂ ಬಿಎಸ್ ವೈ ಕ್ರಮಕ್ಕೆ ಮುಂದಾಗಿಲ್ಲ ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

Key words:  MTB Nagaraj –meeting-CM BS Yeddyurappa- minister position