ಕೊರೊನಾ ಟೆಸ್ಟ್: ಆರ್’ಸಿಬಿ ಕೊಯ್ಲಿ ಹುಡುಗರ ಕಾಲೆಳೆದ ಮಿ.ನಾಗ್!

Promotion

ಬೆಂಗಳೂರು, ಆಗಸ್ಟ್ 24, 2020 (www.justkannada.in): ನಟ ಡ್ಯಾನಿಶ್ ಸೇಠ್ ಆರ್​ಸಿಬಿಯಲ್ಲಿ ಮಿ. ನಾಗ್ಸ್ ಆಗಿ ಕಿತಾಪತಿ ಮಾಡುವುದರಿಂದಲೇ ಫೇಮಸ್.

ಆರ್​ಸಿಬಿ ಕ್ಯಾಂಪ್​​ಗೆ ಭೇಟಿನೀಡಿ ಆಟಗಾರರನ್ನು ಕಾಲೆಳೆಯುತ್ತಾ, ಜನರನ್ನು ರಂಚಿಸುತ್ತಿರುತ್ತಾರೆ. ಹೀಗಾಗಿ ಅವರಿಗೆ ಕೇವಲ ಆರ್​ಸಿಬಿ ಅಭಿಮಾನಿಗಳು ಮಾತ್ರವಲ್ಲದೆ ದೇಶ- ವಿದೇಶಗಳಲ್ಲಿ ಫ್ಯಾನ್ಸ್ ಇದ್ದಾರೆ.

ಸದ್ಯ ಈ ವರ್ಷವೂ ಆರ್​ಸಿಬಿಗೆ ಕಮ್​ಬ್ಯಾಕ್ ಮಾಡಿರುವ ನಾಗ್ಸ್​ ಮತ್ತೆ ಅಭಿಮಾನಿಗಳನ್ನು ನಗುವಿನ ಅಲೆಯಲ್ಲಿ ತೇಲಿಸುತ್ತಿದ್ದಾರೆ.

ಸದ್ಯ ಮಿ. ನಾಗ್ಸ್​ ಆರ್​ಸಿಬಿ ಆಟಗಾರರನ್ನು ಕಾಲೆಳೆಯುವ ಮೊದಲ ವಿಡಿಯೋ ಬಿಡುಗಡೆಯಾಗಿದ್ದು ಇದುಕೂಡ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವಿಷಯ ಏನೆಂದರೆ ಕೊರೋನಾ ಟೆಸ್ಟ್​.

ಆರ್​ಸಿಬಿ ಆಟಗಾರರು ಯುಎಇಗೆ ತಲುಪಿ ಕೊರೋನಾ ಟೆಸ್ಟ್​ ಮಾಡುವ ವೇಳೆ ಮಿ. ನಾಗ್ಸ್​, ಪವನ್ ನೇಗಿ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನು ಚೆನ್ನಾಗಿಯೇ ಕಾಲೆಳೆದಿದ್ದಾರೆ.