ಮಧ್ಯಂತರ ಚುನಾವಣೆ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹೇಳಿಕೆ ಕುರಿತು ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿ…

Promotion

ಚಾಮರಾಜನಗರ,ಜೂ,22,2019(www.justkannada.in):  ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನೀಡಿದ್ದ ಹೇಳಿಕೆ ಕುರಿತು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.

ಅವರು ಗೆದ್ದಾಗ ಒಂದು ತರ ಸೋತಾಗ ಒಂದು ರೀತಿ ಮಾತನಾಡುತ್ತಾರೆ. ಹೆಚ್.ಡಿ ದೇವೇಗೌಡರು ಸೋತರೇ ಮಧ್ಯಾಂತರ ಚುನಾವಣೆ ಬರುತ್ತಾ..? ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹರಿಹಾಯ್ದಿದ್ದಾರೆ.

ಚಾಮರಾಜನಗರದಲ್ಲಿ ಇಂದು ಮಾತನಾಡಿದ ಶ್ರೀನಿವಾಸ್ ಪ್ರಸಾದ್, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಆಗಬೇಕು ಅಂದರೆ ಸಾಕಷ್ಟು ಬೆಳವಣಿಗೆಯಾಗಬೇಕು.  ಆದರೆ ಹೆಚ್.ಡಿ ದೇವೇಗೌಡರು ಮತ್ತು ಸಿಎಂ ಹೆಚ್.ಡಿ ಕುಮಾರಸ್ವಾಮಿ  ಏನೇನೋ ಹೇಳ್ತಾರೋ ಗೊತ್ತಾಗಲ್ಲ. ಅಂದರೇ ಅಷ್ಟರ ಮಟ್ಟಿಗೆ ಆಡಳಿತ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.

ಹಾಗೆಯೇ ಒಂದು ಕಡೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡುತ್ತಿದ್ದರೇ ಇನ್ನೊಂದೆಡೆ ಹೆಚ್.ಡಿ ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಎಲ್ಲಾ ಬೆಳವಣಿಗೆಗಳನ್ನ ಬಿಜೆಪಿ ನೋಡುತ್ತಿದೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

key words: MP Srinivas Prasad -spits – former prime minister- HD Deve Gowda- midterm elections