ಮೈಸೂರು ವಿವಿಯ ಬೌದ್ಧ ಅಧ್ಯಯನ ಕೇಂದ್ರ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡುವಂತೆ ಪ್ರಧಾನಿ ಮೋದಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ಮನವಿ.

ಮೈಸೂರು,ಜೂನ್,21,2022(www.justkannada.in): ಮೈಸೂರು ವಿಶ್ವ ವಿದ್ಯಾನಿಲಯದ ಬೌದ್ಧ ಅಧ್ಯಯನ ಕೇಂದ್ರ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಚಾಮರಾಜ ನಗರ ಸಂಸದ ಶ್ರೀನಿವಾಸ್ ಪ್ರಸಾದ್ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಸಂಸದ ಶ್ರೀನಿವಾಸ್ ಪ್ರಸಾದ್, ನಾನು ಮೈಸೂರು ವಿವಿಯ ಹಳೆಯ ವಿದ್ಯಾರ್ಥಿ. ನಾನು ಐದು ದಶಕಗಳಿಂದ ಸಕ್ರಿಯ ಚುನಾವಣಾ ರಾಜಕೀಯದಲ್ಲಿದ್ದೇನೆ. ಚಾಮರಾಜನಗರ ಕ್ಷೇತ್ರದಿಂದ ಆರು ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಎರಡು ಬಾರಿ ವಿಧಾನಸಭೆಗೂ ಕೂಡಾ ಆಯ್ಕೆಯಾಗಿದ್ದೇನೆ. ವಾಜಪೇಯಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ.  ಐದು ದಶಕಗಳ ಕಾಲದ ನನ್ನ ರಾಜಕೀಯ ವೃತ್ತಿಜೀವನವು ನಿಷ್ಪಕ್ಷಪಾತವಾಗಿದೆ.

2024 ರ ಅಂತ್ಯದ ವೇಳೆಗೆ ನಾನು ಸಕ್ರಿಯ ಚುನಾವಣಾ ರಾಜಕೀಯದಲ್ಲಿ  50 ವರ್ಷಗಳನ್ನು ಪೂರ್ಣಗೊಳಿಸಲಿದ್ದೇನೆ. ಬೌದ್ಧ ಅಧ್ಯಯನ ಕೇಂದ್ರ ಆರಂಭಿಸಲು ಭೂಮಿ ಹಾಗೂ ಆರ್ಥಿಕ ನೆರವು ನೀಡಲು ಮೈಸೂರು ವಿವಿ ಮುಂದೆ ಬಂದಿದೆ.  ನನ್ನ ಬಹುದಿನದ ಮಹತ್ವಾಕಾಂಕ್ಷೆಯ ಸಾಕಾರಗೊಳ್ಳುವ ಕ್ಷಣವಾಗಿದೆ. ಈ ನಿಟ್ಟಿನಲ್ಲಿ ಮೈಸೂರು ವಿವಿ ಉಪಕುಲಪತಿಗಳ ಪ್ರಸ್ತಾವನೆ ಪರಿಗಣಿಸಿ ಕೇಂದ್ರ 10 ಕೋಟಿ ಆರ್ಥಿಕ ಸಹಾಯ ನೀಡಬೇಕೆಂದು ಪತ್ರದ ಮೂಲಕ ಸಂಸದ ಶ್ರೀನಿವಾಸ್ ಪ್ರಸಾದ್ ಮನವಿ ಮಾಡಿದರು.

Key words: MP-Srinivas Prasad-Prime Minister- Modi- -Buddhist –Studies- Center

ENGLISH SUMMARY…

[3:49 pm, 21/06/2022] kishor jk bangalore: MP Srinivas Prasad appeals to PM Modi to provide Rs. 10 crore grants for the development of the Buddha Research Center of UoM
Mysuru, June 21, 2022 (www.justkannada.in): MP Srinivas Prasad has appealed to Prime Minister Narendra Modi to provide Rs. 10 crores for the development of the Buddha Research Center, under the University of Mysore.
In his letter written to the PM, the MP Srinivas Prasad mentioned, “I am an alumnus of the University of Mysore. I am in electoral politics for the last five decades. I have been elected to the Lok Sabha from the Chamarajanagara constituency six times and two times to the Legislative Assembly. I was the Minister for Food and Civil Supplies in former PM Vajpayee’s cabinet. My five decades-long political life has been unbiased.
I will complete 50 years of electoral politics in the year 2024. The University of Mysore has come forward to provide land and financial assistance for the development of the Buddha Research Center. It is my long-pending desire. I request your honor self to kindly consider the proposal of the Vice-Chancellor of the University of Mysore and grant a sum of Rs. 10 crores for the purpose,” he wrote in the letter.

Keywords: MP Srinivas Prasad/ writes letter/ PM Narendra Modi/ Buddha Research Center/ University of Mysore