ಸಂಸದ ರಮೇಶ್ ಜಿಗಜಿಣಗಿ ಮಾಜಿ ಕಾರುಚಾಲಕನ ಹತ್ಯೆಗೈದ ದುಷ್ಕರ್ಮಿಗಳು.

Promotion

ವಿಜಯಪುರ,ಜನವರಿ,19,2023(www.justkannada.in):  ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರ ಬಳಿ ಕಾರು ಚಾಲಕನಾಗಿ ಕೆಲಸ ನಿರ್ವಹಿಸಿದ್ಧ ವ್ಯಕ್ತಿಯನ್ನ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ಮಲ್ಲಿಕಾರ್ಜುನ ದೊಡ್ಡಮನಿ ಕೊಲೆಯಾದ ಕಾರು ಚಾಲಕ. ಅಲಕುಂಟೆ ನಗರದಲ್ಲಿ ನಿನ್ನೆ ತಡರಾತ್ರಿ ಮಲ್ಲಿಕಾರ್ಜುನ ದೊಡ್ಡಮನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ರಮೇಶ್ ಜಿಗಜಿಣಗಿ ಬಳಿ ಕಾರು ಚಾಲಕನಾಗಿ ಕೆಲಸ ಮಾಡಿದ್ಧ ಮಲ್ಲಿಕಾರ್ಜುನ ದೊಡ್ಡಮನಿ ಕಳೆದ ಮೂರು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು. ಇನ್ನು ಹಣಕಾಸು ವಿಚಾರಕ್ಕೆ ಮಲ್ಲಿಕಾರ್ಜುನ ಅವರ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: MP- Ramesh Jigajinagi -ex-car driver –killed-vijaypur