ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ತಾಯಿ ಮಗ ಸಾವು…

Promotion

ಕಾರವಾರ,ಫೆಬ್ರವರಿ,14,2021(www.justkannada.in):   ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ತಾಯಿ ಹಾಗೂ ಮಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.jk

ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ಈ ಘಟನೆ  ನಡೆದಿದೆ. ರವಿ ಸಿದ್ದಿ (24), ಬೇಬಿ ಸಿದ್ದಿ (50) ಮೃತಪಟ್ಟವರು. ಯಕ್ಷಗಾನ ನೋಡಿಕೊಂಡು ಕೊಡ್ಲಗದ್ದೆಯಿಂದ ಅಂಗಡಿಬೈಲ್ ಕಡೆ ಬೈಕ್ ​ನಲ್ಲಿ ತೆರಳುತ್ತಿದ್ದ ವೇಳೆ  ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.Mother-son- dies – bike- collides - power pole

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mother-son- dies – bike- collides – power pole