ಕಪಿಲಾ ನದಿಗೆ ಹಾರಿ ತಾಯಿ ಮಗಳು ಆತ್ಮಹತ್ಯೆಗೆ ಶರಣು…

Promotion

ಮೈಸೂರು,ಆ,26,2019(www.justkannada.in)  ಕಪಿಲಾ ನದಿಗೆ ಹಾರಿ ತಾಯಿ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

ಮೈಸೂರಿನ ನಂಜನಗೂಡು ಹುಲ್ಲಗಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುಂಜುಳಾ ( 38)ಸೌಮ್ಯ (19) ಮೃತಪಟ್ಟ ತಾಯಿ ಮಗಳು. ಮೃತರು ಮೈಸೂರಿನ ಬಂಡಿಪಾಳ್ಯ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ ತಾಯಿ ಮಗಳು ಇಬ್ಬರು ದೇವಸ್ಥಾನಕ್ಕೆ ಹೋಗುವುದಾಗಿ  ಮನೆಯಿಂದ ಬಂದು ಕಪಿಲಾನದಿ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mother- Daughter- commits- suicide -jumping – Kapila River-nanjanagud