ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವನ್ನಪ್ಪಿದ ಪ್ರಕರಣ: ಸುಮೋಟೋ ಕೇಸ್ ದಾಖಲಿಸಿಕೊಂಡ ಹೈಕೋರ್ಟ್.

Promotion

ಬೆಂಗಳೂರು,ಜನವರಿ,13,2023(www.justkannada.in): ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು,  ಸುಮೋಟೋ ಕೇಸ್ ದಾಖಲಿಸಿಕೊಂಡಿದೆ.

ಪ್ರಕರಣ ಸಂಬಂಧ ಕಳವಳ ವ್ಯಕ್ತಪಡಿಸಿರುವ  ಹೈಕೋರ್ಟ್ ಸಿಜೆ ವರಾಳೆ,  ಪಿಲ್ಲರ್ ಕುಸಿದು ತಾಯಿ ಮಗ ಮೃತಪಟ್ಟಿದ್ದಾರೆ.  ನಿನ್ನೆ ಮೆಟ್ರೊ ಮಾರ್ಗದಲ್ಲಿ ಗುಂಡಿ ಬಿದ್ದಿದೆ.  ರಸ್ತೆ ಸುರಕ್ಷತೆ ಬಗ್ಗೆ ಚಿಂತನೆಗೀಡು ಮಾಡಿದೆ  ಎಂದಿದ್ದಾರೆ.

ರಾಜ್ಯ ಸರ್ಕಾರ, ಬಿಎಂಆರ್ ಸಿಎಲ್ ಮತ್ತು ಬಿಬಿಎಂಪಿಯನ್ನ   ಪ್ರತಿವಾದಿಯಾಗಿಸಿದ ಹೈ ಕೋರ್ಟ್.  ಕಾಮಗಾರಿಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳೇನು. ದಾಖಲೆಗಳಲ್ಲಿ ಸುರಕ್ಷತೆ ಒಳಗೊಂಡಿದೆಯೇ..? ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿಯಾಗಿದೆಯೇ..? ಎಂಬ ಬಗ್ಗೆ ಸರ್ಕಾರದಿಂದ ಮಾಹಿತಿ ಕೇಳಿದ್ದು,  ರಿಟ್ ಅರ್ಜಿ ಸಲ್ಲಿಸಲು ಕೋರ್ಟ್ ಸೂಚನೆ ನೀಡಿದೆ.

Key words: Mother – child- died – metro- pillar –fell- Sumoto case – High Court.