ವಿಧಾನಸೌದಧಲ್ಲಿ ಮಳೆಗಾಲ ಅಧಿವೇಶನ- ಸಿದ್ಧತೆ ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಿದ ಸಚಿವ ಮಾಧುಸ್ವಾಮಿ…

Promotion

ಬೆಂಗಳೂರು,ಆ,24,2020(www.justkannada.in):   ಈ ಬಾರಿ ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ಮಾಡಲಾಗುತ್ತದೆ. ಸಭಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸದನವನ್ನು ಪರಿಶೀಲಿಸಿದ್ದು ಅಗತ್ಯ ಕ್ರಮಗಳೊಂದಿಗೆ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.jk-logo-justkannada-logo

ವಿಧಾನಸೌಧದಲ್ಲಿ ಇಂದು ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಎರಡು ಸೀಟಿನ ಮಧ್ಯೆ ಗಾಜಿನ ಪರದೆ ಹಾಕಲಾಗುತ್ತದೆ. ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಸಾರ್ವಜನಿಕರಿಗೆ ಪಾಸ್ ನೀಡಲಾಗುವುದಿಲ್ಲ.  ಅಧಿವೇಶನದ ವೇಳೆ ಪತ್ರಕರ್ತರಿಗೆ ಎರಡು ಗ್ಯಾಲರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.monsoon-session-minister-madhuswamy-information-preparation-rules

ಸದನದಲ್ಲಿ ಪ್ರತಿ ಸದಸ್ಯರಿಗೆ ಫೆಸ್ ಶೀಲ್ಡ್ , ಮಾಸ್ಕ್ ವಿತರಿಸಲಾಗುತ್ತದೆ. ಸದನಕ್ಕೆ ಹಾಜರಾಗಲು ಉನ್ನತ ಅಧಿಕಾರಿಗಳಿಗೆ ಅವಕಾಶ ನೀಡಲಾಗುತ್ತದೆ. ಇಲಾಖೆಗೆ ಒಬ್ಬರು ಅಧಿಕಾರಿ ಮಾತ್ರ ಸದನಕ್ಕೆ ಬರಬೇಕು. ಈ ನಡುವೆ ಸಚಿವ ಜತೆ ಪಿಎಸ್ ಮಾತ್ರ ಇರಬೇಕಾಗುತ್ತದೆ. ಇನ್ನು ಸಭಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸದನವನ್ನು ಪರಿಶೀಲಿಸಿದ್ದು, ಸ್ಪೀಕರ್ ತೀರ್ಮಾನಕ್ಕೆ ನಮ್ಮ ಸಮ್ಮತಿ ಇದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

Key words: Monsoon -session – Minister –Madhuswamy- information -preparation – rules.