ಮೋದಿ ಹೆಸರೇಳಿದರೆ ವೋಟ್ ಬೀಳುತ್ತೆ, ಆದ್ರೆ ರಾಹುಲ್ ಗಾಂಧಿ ಹೆಸರೇಳಿದರೆ ಬರುವ ಮತವೂ ಹೋಗುತ್ತೆ- ಶಾಸಕ ಸಿ.ಟಿ ರವಿ ವ್ಯಂಗ್ಯ.

Promotion

ಕೋಲಾರ,ಫೆಬ್ರವರಿ,9,2023(www.justkannada.in): ಬಿಜೆಪಿಯವರು ವೋಟ್ ಕೇಳಲು  ಯಾವುದೇ ಅಭಿವೃದ್ದಿ ಕಾರ್ಯಗಳಿಲ್ಲ. ಹೀಗಾಗಿ ಮೋದಿಯವರನ್ನ ಮುಂದಿಟ್ಟುಕೊಂಡು ಮತ ಕೇಳುತ್ತಾರೆ ಎಂಬ ಕಾಂಗ್ರೆಸ್ ಟೀಕೆಗೆ ಶಾಸಕ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ ಹೆಸರೇಳಿದರೇ ವೋಟ್ ಬರುತ್ತೆ. ಆದರೆ ನಿಮಗೆ ರಾಹುಲ್ ಗಾಂಧಿ ಹೆಸರೇಳಿದರೇ ಬರುವ ಮತವೂ ಹೋಗುತ್ತೆ. ಇದು ನಮ್ಮ ಅದೃಷ್ಟ. ಅದು ನಿಮ್ಮ ದುರಾದೃಷ್ಟ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದರು.

ಕೋಲಾರದಲ್ಲಿ ಇಂದು ಮಾತನಾಡಿದ ಶಾಸಕ ಸಿ.ಟಿ ರವಿ, ಸುಳ್ಳು ಹಾಗೂ ಕಾಂಗ್ರೆಸ್  ಒಂದೇ ನಾಣ್ಯದ ಎರಡು ಮುಖಗಳು. ರಾಜಸ್ತಾನ ಛತ್ತೀಸ್ ಘಡ್, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾರೆ ಆ ರಾಜ್ಯಗಳಲ್ಲಿ ಕಾಂಗ್ರೆಸ್ ಉಚಿತ ವಿದ್ಯುತ್  ಪೂರೈಸುತ್ತಿದ್ದಾರಾ. ಹಿಮಾಚಲ ಪ್ರದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿದ್ದಾರೆ. ಕಾಂಗ್ರೆಸ್ ಹೇಳುವುದು ಒಂದು ಮಾಡುವುದು ಒಂದು . ಸೋಲ್ತೇವೆ ಅಂತಾ ಗೊತ್ತಾಗಿದ್ದಕ್ಕೆ ಉಚಿತ ಘೋಷಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Modi-name-vote-Rahul Gandhi- MLA-CT Ravi