ಮೋದಿ, ಅಮಿತ್ ಶಾ ರಾಜ್ಯಕ್ಕೆ ನೂರು ಬಾರಿ ಬಂದ್ರೂ ಬಿಜೆಪಿ ಅಧಿಕಾರಕ್ಕೆ ಬರೋದು ಕಷ್ಟ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

Promotion

ಬೆಂಗಳೂರು,ಜನವರಿ,14,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ  ರಾಜಕೀಯ ಚಟುವಟಿಕೆ ಗರಿಗೆದರಿದ್ದು ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪ ,ವಾಕ್ಸಮರ ಮುಂದುವರೆದಿದೆ. ಈ ನಡುವೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇಂದುಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮೋದಿ,ಅಮಿತ್ ಶಾ ರಾಜ್ಯಕ್ಕೆ ನೂರು ಬಾರಿ ಬಂದ್ರೂ ಬಿಜೆಪಿ ಅಧಿಕಾರಕ್ಕೆ ಬರೋದು ಕಷ್ಟ. ಕಾಂಗ್ರೆಸ್ ಭಾರತ್ ಜೋಡೋ ಅಂತಿದ್ದಾರೆ.  ಎರಡು ಪಕ್ಷಗಳಲ್ಲಿ ಅಭಿವೃದ್ದಿ ವಿಚಾರಗಳು ಎಲ್ಲಿವೆ ಎಂದು ಕಿಡಿಕಾರಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಸ್ಪಷ್ಟ ಬಹುಮತ ಬರುತ್ತೆ. ಹೆಚ್ಡಿಕೆ ಹೋದಲ್ಲಿ ಜನ ಸೇರುತ್ತಾರೆ ಆದರೆ ಮತಗಳಾಗಿ ಬದಲಾಗಲ್ಲ ಅಂತಿದ್ರು .  ಆದರೆ ಈಗ ಬದಲಾಗಿದೆ.  ರಾಜ್ಯದ ಜನರು 2 ರಾಷ್ಟ್ರೀಯ ಪಕ್ಷಗಳು ಬೇಡ  ಜೆಡಿಎಸ್ ಬೇಕು ಅಂತಿದ್ದಾರೆ . ಹೀಗಾಗಿ 123 ಸ್ಥಾನ ಗೆಲ್ಲಿವುದು ನಿಶ್ಚಿತ ಎಂದು ಹೆಚ್.ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.

Key words: Modi – Amit Shah – state- hundred – BJP – power-  Former CM -HD Kumaraswamy.