“ಆಧುನಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಮಹೋನ್ನತ ಆವಿಷ್ಕಾರಗಳಾಗುತ್ತಿವೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

Promotion

ಮೈಸೂರು,ಫೆಬ್ರವರಿ,19,2021(www.justkannada.in) : ಆಧುನಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಇತ್ತೀಚಿನ ಹಲವು ಬೆಳವಣಿಗೆಗಳು ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್, ಬಯೋಕೆಮಿಸ್ಟ್ರಿ ಮತ್ತು ಆಣ್ವಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಮಹೋನ್ನತ ಆವಿಷ್ಕಾರಗಳನ್ನು ಕಾಣಬಹುದಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು. Modern-Biology-field-Outstanding-Inventions-Chancellor-Prof. G.Hemant Kumar

ಮೈಸೂರು ವಿವಿ ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ಅಧ್ಯಯನ ವಿಭಾಗದ ವತಿಯಿಂದ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ “ಜೆನೆಟಿಕ್ಸ್ ಮತ್ತು ಜೆನೊಮಿಕ್ಸ್ನಲ್ಲಿನ ಇತ್ತೀಚಿನ ಸುಧಾರಣೆಗಳು” ವಿಷಯ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದು ಆನುವಂಶಿಕತೆಯು ಆಣ್ವಿಕ ತಳಿಶಾಸ್ತ್ರ ಮತ್ತು ಜೀನೋಮಿಕ್ ವಿಶ್ಲೇಷಣೆಯ ಪ್ರಬಲ ಸಾಧನಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ ಎಂದು ವಿಶ್ವಾಸವಿದೆ ಎಂದರು.

ಭಾರತ ಮತ್ತು ಇತರೆ ದೇಶಗಳ ಜನರ ವೈವಿಧ್ಯತೆಯನ್ನು ವೈದ್ಯಕೀಯ ಇತಿಹಾಸಗಳೊಂದಿಗೆ ಅನುಕ್ರಮವಾದ ವೈಯಕ್ತಿಕ ಜೀನೋಮಿಕ್ಸ್ ಅನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. Modern-Biology-field-Outstanding-Inventions-Chancellor-Prof. G.Hemant Kumar

ಜೀನ್ ಹೇಗೆ ಕಾರ್ಯನಿರ್ವಹಿಸುತ್ತದೆ, ಅವುಗಳನ್ನು ಹೇಗೆ ನಿಯಂತ್ರಿಸಲಾಗುತ್ತದೆ ಮತ್ತು ಜೆನೆಟಿಕ್ಸ್ ದೋಷಗಳನ್ನು ಹೇಗೆ ಕಂಡುಹಿಡಿಯಬಹುದು, ಮಾರ್ಪಡಿಸಬಹುದು ಅಥವಾ ಸರಿಪಡಿಸಬಹುದು ಇತರೆ ವಿಷಯಗಳ ಮೇಲೆ ವಿಚಾರಸಂಕಿರಣವು ಬೆಳಕು ಚೆಲ್ಲಲಿ ಎಂದರು.

ಜೆನೆಟಿಕ್ಸ್ ವಿಭಾಗವು ಹಿರಿಯ ಅಧ್ಯಾಪಕರ ಮಾರ್ಗದರ್ಶನದಿಂದ ಅಭಿವೃದ್ಧಿಯಾಗಿದ್ದು, ಈ ವಿಭಾಗವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿದೆ. ಇದಕ್ಕೆ ಪೂರಕವಾಗಿ ಈ ವಿಚಾರಸಂಕಿರಣವು ಸಹಕಾರಿಯಾಗಲಿ ಎಂದು ಆಶಯವ್ಯಕ್ತಪಡಿಸಿದರು.

ವಿಚಾರಸಂಕಿರಣಕ್ಕೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯರಾಘವನ್, ಬೆಂಗಳೂರು ಸಿಎಚ್ ಜಿ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಚ್.ಎ.ರಂಗನಾಥ್ ಶುಭಹಾರೈಸಿದರು.

Modern-Biology-field-Outstanding-Inventions-Chancellor-Prof. G.Hemant Kumar

ಈ ಸಂದರ್ಭ ಯುಜಿಸಿ-ಬಿಎಸ್ ಆರ್ ಪ್ರಾಧ್ಯಾಪಕ ಪ್ರೊ.ಎನ್.ಬಿ.ರಾಮಚಂದ್ರ, ಕಾರ್ಯಕ್ರಮ ಸಂಘಟನಾ ಸಮಿತಿ ಸದಸ್ಯರಾದ ಪ್ರೊ.ಎಸ್.ಎಸ್.ಮಾಲಿನಿ, ಪ್ರೊ.ಉಪೇಂದ್ರ ನಾಂಗ್ಥೊಂಬಾ, ಡಾ.ತೇಜಸ್ ಕಳಸ್ತವಾಡಿ ಇತರರು ಉಪಸ್ಥಿತರಿದ್ದರು.

ENGLISH SUMMARY….

Advanced Biology is witnessing significant discoveries: MoU VC
Mysuru, Feb. 19, 2021 (www.justkannada.in): “Significant discoveries are being made in genetics and genomics, biochemistry and molecular biological sectors in recent developments in the advanced biological sector,” opined Prof. G. Hemanth Kumar, Vice-Chancellor, University of Mysore.
He inaugurated the two-day International Seminar on the topic, “Recent Improvements in Genetics and Genomics,” held at the Rani Bahaddur Auditorium, in Manasagangotri campus, organized by the Genetics and Genomics Research Division of the University of Mysore.
In his address, he said that genetics is equipped with strong tools from analyzation of analytical genetics and genomics. “The individual genomics of diversity of the people of India and other countries that is sequential with medical history can be clearly understood,” he explained.
“I wish this seminar will focus on topics like the functioning of genes, how it is controlled and how can genetical problems be discovered, modified, and rectified,” he added.
Prof. K. Vijayaraghavn, Chief Scientific Advisor, Government of India, Prof. H.A. Ranganath, Visiting Professor, Bengaluru CAH wished all the best to the seminar.Modern-Biology-field-Outstanding-Inventions-Chancellor-Prof. G.Hemant Kumar
Prof. N.B. Ramachandra, Professor, UGC-BSR, Prof. S.S. Malini, Organising Committee member of the seminar, Prof. Upendra Nangthomba, Dr. Tejas Kalastavaadi, and others were present.
Keywords: Advanced Biology/ genetics/ International seminar/ University of Mysore

key words : Modern-Biology-field-Outstanding-Inventions-Chancellor-Prof. G.Hemant Kumar