ಮೊಬೈಲ್ ಸರಿಯಿಲ್ಲದಿದ್ರೆ ಶಿವಾಜಿನಗರದ ಅಂಗಡಿಯಲ್ಲಿ ರಿಪೇರಿ ಮಾಡಿಸಿಕೊಳ್ಳಲಿ- ಫೋನ್ ಕದ್ಧಾಲಿಕೆ ಆರೋಪ ಕುರಿತು ಸಚಿವ ಆರ್.ಅಶೋಕ್ ಲೇವಡಿ…

Promotion

ಬೀದರ್,ಆಗಸ್ಟ್,27,2020(www.justkannada.in):  ತಮ್ಮ ಫೋನ್ ಕದ್ಧಾಲಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.jk-logo-justkannada-logo

 ದೇಶದಲ್ಲಿ ಫೋನ್ ಕದ್ದಾಲಿಕೆ ಕಂಡು ಹಿಡಿದ ಪಿತಾಮಹರೇ ಕಾಂಗ್ರೆಸ್ಸಿನವರು. ಫೋನ್ ಟ್ಯಾಪಿಂಗ್ ಸೃಷ್ಠಿಕರ್ತರು ಅವರು. ಡಿ.ಕೆ ಶಿವಕುಮಾರ್ ಫೋನ್ ಸರಿಯಾಗಿ ಕೇಳಿಸದಿದ್ದರೇ ಶಿವಾಜಿ ನಗರದ ಅಂಗಡಿಯಲ್ಲಿ ರಿಪೇರಿ ಮಾಡಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು.

ಬೀದರ್ ನಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್ , ಹಿಂದಿನ ಸರ್ಕಾರ ಅವಧಿಯಲ್ಲಿ ಆದಿ ಚುಂಚನಗಿರಿ ಸ್ವಾಮೀಜಿ ಸೇರಿದಂತೆ ಹಲವರ ಫೋನ್ ಕದ್ದಾಲಿಕೆ ಆಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಫೋನ್ ಸೌಂಡ್ ಸರಿಯಾಗಿರದಿದ್ದರೆ ಶಿವಾಜಿ ನಗರದ ಒಳ್ಳೆ ಅಂಗಡಿಯಲ್ಲಿ ರಿಪೇರಿ ಮಾಡಿಸಿಕೊಳ್ಳಲಿ, ಆಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಧ್ವನಿ ಸರಿಯಾಗಿ ಕೇಳಿಸುತ್ತದೆ. ಸಿದ್ಧರಾಮಯ್ಯ ಅಂತು ಫೋನ್ ಮಾಡಲ್ಲ ಎಂದು ವ್ಯಂಗ್ಯವಾಡಿದರು.

 

Key words: Mobile- Repair- Minister -R. Ashok –Tong- DK Sivakumar.