ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಗುರಿ: ಅನರ್ಹ ಶಾಸಕರ ಬಿಜೆಪಿ ಸೇರ್ಪಡೆ ಕುರಿತು ಎಂಎಲ್ ಸಿ ರವಿಕುಮಾರ್ ಹೇಳಿದ್ದೇನು ಗೊತ್ತೆ…?

Promotion

ಬೆಂಗಳೂರು,ಆ,2,2019(www.justkannada.in): ದೇಶಾದ್ಯಂತ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು,  ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಎಲ್ ಸಿ ರವಿಕುಮಾರ್ , ದೇಶಾದ್ಯಂತ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, 5 ನೇ ತಾರೀಖು ಮೋರ್ಚಗಳ ಮುಖಂಡರ ಜತೆ ಸಭೆ ನಡೆಯಲಿದೆ. ಶಾಸಕರು, ಸಂಸದರು, ಎಂಟು ಮೋರ್ಚಗಳ ಸದಸ್ಯರು ಭಾಗವಹಿಸಲಿದ್ದಾರೆ .ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಣ್ 8ನೇ ತಾರೀಖಿನಂದು ರಾಜ್ಯಕ್ಕೆ ಬರಲಿದ್ದಾರೆ. ಸದಸ್ಯತ್ವ ನೋಂದಣಿ ವಿಚಾರದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿ ಇದೆ. 8787 ಕಾರ್ಯಕರ್ತರು ಸದಸ್ಯತ್ವ ನೋಂದಣಿ ಮಾಡುವಲ್ಲಿ ಫುಲ್ ಟೈಮ್ ವರ್ಕರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. 3’4 ಮತ್ತು 10,11 ಫುಲ್ ಡೇ ಸದಸ್ಯತ್ವ  ನೋಂದಣಿ ದಿನಗಳಾಗಿ ತೀರ್ಮಾನ ಮಾಡಿದ್ದೇವೆ ಎಂದರು.

ಅನರ್ಹ ಶಾಸಕರ ಬಿಜೆಪಿ ಸೇರ್ಪಡೆಗೆ ಬೆಂಗಳೂರಲ್ಲಿ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರವಿಕುಮಾರ್,ಯಾರನ್ನೇ ಪಕ್ಷದಲ್ಲಿ ಸೇರಿಸಿಕೊಳ್ಳಬೇಕದ್ರೆ ಮೊದಲು ಕೋರ್ ಕಮಿಟಿಯಲ್ಲಿ ಚರ್ಚೆ ಆಗುತ್ತೆ. ಅದರ ಬಳಿಕ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಅಲ್ಪಸಂಖ್ಯಾತ ಮತ್ತು ದಲಿತರನ್ನ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಇದು ಈಗ ಅವರಿಗೂ ಅರ್ಥವಾಗಿದೆ ಹೀಗಾಗಿ ಈ ಬಾರಿ ಸದಸ್ಯತ್ವದ ನೋಂದಣಿ ಸಮಯದಲ್ಲಿ ಅಲ್ಪಸಂಖ್ಯಾತ ಮತ್ತು ದಲಿತರನ್ನ ನೊಂದಾಣಿಗೆ ಹೆಚ್ಚು ಆಸಕ್ತಿ ವಹಿಸಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಜಗದೀಶ್ ಹಿರೇಮಣಿ  ಮಾತನಾಡಿ, ಕನಿಷ್ಠ 5 ಲಕ್ಷ ಅಲ್ಪಸಂಖ್ಯಾತ ರನ್ನ ಸದಸ್ಯತ್ವ ನೋಂದಣಿ ಮಾಡಲು ನಿರ್ಧಾರ ಮಾಡಿದ್ದೇವೆ.ಒಬ್ಬ ಕಾರ್ಯಕರ್ತ ಒಂದು ಗಿಡ ನೆಡಲು ಸೂಚನೆ ನೀಡಿದ್ದೇವೆ. ಸದಸ್ಯತ್ವ ನೋಂದಣಿ ಮುಗಿಯುವ ಒಳಗೆ ಐದು ಲಕ್ಷ ಗಿಡ ನೆಡುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ಸಸಿ ನಡೆವುದಷ್ಟೇ ಅಲ್ಲ ಅದನ್ನ ಪೋಷಣೆ ಮಾಡುವುದು ಸಹ ಅವರ ಜವಾಬ್ದಾರಿ ಎಂದರು.

Key words: MLC -Ravikumar – BJP- inclusion – Disqualify MLAs.