ಪಕ್ಷ ಬಿಟ್ಟು ಹೋಗಲಿ ಎಂದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಡಿ ಹೊಗಳಿದ ಹೆಚ್. ವಿಶ್ವನಾಥ್.

Promotion

ಮೈಸೂರು,ಡಿಸೆಂಬರ್,17,2022(www.justkannada.in): ಪಕ್ಷ ಬಿಟ್ಟು ಹೋಗಲಿ ಎಂದ ಸಂಸದ ಪ್ರತಾಪ್ ಸಿಂಹ ವಿರುದ್ಧ ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಯಾರ್ ರೀ ಅವನು ಪ್ರತಾಪ್ ಸಿಂಹ..? ನನ್ನನ್ನು ಪಕ್ಷ ಬಿಡು ಅನ್ನಲು ಅವನ್ಯಾರು..?  ಪಕ್ಷ ಬಿಟ್ಟು ಹೋಗಲಿ ಅನ್ನೋಕೆ ಅವನ್ಯಾರು..? ನಾನು ಮಾತನಾಡಿರೋದು ಸರಿಯೋ ತಪ್ಪೋ ಅದನ್ನು ಕೇಳೋಕೆ ರಾಜ್ಯಾಧ್ಯಕ್ಷರು ಇದ್ದಾರೆ. ಅವನು ರಾಜ್ಯಾಧ್ಯಕ್ಷನೇ.? ಪ್ರತಾಪ್ ಸಿಂಹ ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿನಗೇನಿದೆಯಾ.? ನೀನೇ ಸರಿಯಿಲ್ಲ ಬೇರೆಯವರಿಗೆ ಬುದ್ದಿ ಹೇಳೋ ಕೆಲಸ ಮಾಡುತ್ತಿದ್ದೀಯ ಥೂ.. ಬೇರೆಯವರು ಮಾಡಿರುವ ಕೆಲಸವನ್ನು ನಾನು ಮಾಡಿದ್ದು ಅಂತ ಹೇಳಿ ತಿರುಗುತ್ತೀಯಾ.. ನಾಚಿಕೆ ಆಗಬೇಕು ನಿನಗೆ. ಆಸ್ಕರ್‌ ಫರ್ನಾಂಡಿಸ್ ಅವರ ಕಾಲದ ಆಗಿರುವ  ರಸ್ತೆ ಕಾಮಗಾರಿ ನಾನು ಮಾಡಿಸಿದೆ ಅಂತೀಯಾ ಎಂದು ಗುಡುಗಿದರು.

ನಿಜವಾದ ದೇಶ ಭಕ್ತೆ ಇಂದಿರಾ ಗಾಂಧಿ- ಹಾಡಿ ಹೊಗಳಿದ ಹೆಚ್.ವಿಶ್ವನಾಥ್

ನಿಜವಾದ ದೇಶ ಭಕ್ತೆ ಇಂದಿರಾ ಗಾಂಧಿ. ಅವರ ಮನೆ ಇಂದು ಮ್ಯೂಸಿಯಂ ಆಗಿದೆ. ಅಲ್ಲಿರುವ ದೇವರ ಕೋಣೆಯಲ್ಲಿ ದೇವರ ಫೋಟೋಗಳಿಲ್ಲ. ಅದಕ್ಕೆ ಬದಲಾಗಿ ಭಾರತದ ಭೂಪಟ ಇದೆ. ಹಾಗಾಗಿ ಅವರು ನಿಜವಾದ ದೇಶ ಭಕ್ತರು. ಇವರ್ಯಾರೋ ನಾವು ದೇಶ ಭಕ್ತರು ಅಂತ ಹೇಳಿಕೊಂಡು ಓಡಾಡುತ್ತಾರಲ್ಲ ಇವರಲ್ಲ ದೇಶ ಭಕ್ತರು ಎಂದು ಕಾಂಗ್ರೆಸ್ ಅಧಿನಾಯಕಿ ದಿವಂಗತ ಇಂದಿರಾ ಗಾಂಧಿ ಅವರನ್ನ ಹಾಡಿ ಹೊಗಳಿದರು.

ನನ್ನ ಜಂಡ ಬದಲಾಗಬಹುದು ನನ್ನ ಅಜೆಂಡಾ ಬದಲಾಗಲ್ಲ. ನಾನು ಯಾವ ಪಕ್ಷದಲ್ಲಿದ್ದಲ್ಲಿದ್ದರು ತಪ್ಪು ಮಾಡಿದರೆ ಯಾರೇ ಆದರೂ ಅದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಕುಕ್ಕರ್ ಬಾಂಬ್ ಸ್ಫೋಟ ಕುರಿತು ಹೇಳಿಕೆ:  ಡಿಕೆ ಶಿವಕುಮಾರ್ ಪರ ಹಳ್ಳಿಹಕ್ಕಿ ಬ್ಯಾಟಿಂಗ್.

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಕುರಿತು  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಯನ್ನ ಸಮರ್ಥಿಸಿಕೊಂಡ ಎಂಎಲ್ಸಿ ಎಚ್ ವಿಶ್ವನಾಥ್, ಹೌದು ಬಿಜೆಪಿಯವರು ಒಂದನ್ನ ಮುಚ್ಚಿ ಹಾಕಲು ಇನ್ನೊಂದನ್ನ ಹುಟ್ಟು ಹಾಕುತ್ತಾರೆ. ಡಿಕೆ ಶಿವಕುಮಾರ್ ಹೇಳಿರುವುದರಲ್ಲಿ ತಪ್ಪಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲೂ ಜನರಿಗೆ ಮೋಸ ಮಾಡಲಿಕ್ಕೆ ಹೋಗುತ್ತಿರಲ್ಲಿರಿ. ಅದೂ ಸಿಎಂ ಕೂಡ ಇದರಲ್ಲಿ ಕೈ ಜೋಡಿಸಿದ್ದಾರೆ. ಎಂಥಾ ಹೀನ ಕೆಲಸಕ್ಕೆ ಕೈ ಹಾಕಿದ್ರಿ ನಾಚಿಕೆ ಆಗಬೇಕು ನಿಮಗೆ. ಇದನ್ನು ಮುಚ್ಚಿ ಹಾಕಲು ಅದೇ ಸಂದರ್ಭದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಹಟ್ಟು ಹಾಕಿದ್ದು ನಿಜ. ಡಿಕೆ ಶಿವಕುಮಾರ್ ಹೇಳಿರುವುದರಲ್ಲಿ ತಪ್ಪಿಲ್ಲ  ಎಂದು ಹೆಚ್.ವಿಶ್ವನಾಥ್ ಹೇಳಿದರು.

Key words:  MLC-H. Vishwanath- praised -Former Prime Minister -Indira Gandhi