ಕನ್ನಡ ಶಾಲೆಗಳನ್ನು ಮುಚ್ಚುವ ಎಲ್ಲಾ ಹುನ್ನಾರ ನಡೆಯುತ್ತಿದೆ- ಶುಲ್ಕ ವಸೂಲಿಗೆ ಮುಂದಾದ ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಆಕ್ರೋಶ.

Promotion

ಮೈಸೂರು,ಅಕ್ಟೋಬರ್,22,2022(www.justkannada.in): ಸರ್ಕಾರಿ ಶಾಲೆಗಳಲ್ಲಿ ನೂರು ರೂಪಾಯಿ ಶುಲ್ಕ ವಸೂಲಿ ಮುಂದಾದ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಶಿಕ್ಷಣ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಇಂದು ಶಾಲಾ ಶಿಕ್ಷಣ ಒಂದು ರೀತಿ ದಿಕ್ಕು ತಪ್ಪುತ್ತಿದೆ. 100 ರೂ ಶುಲ್ಕ ವಿಧಿಸುವುದು ಏಕೆ..? ಏನೂ ಅಂಥ ಅರ್ಥ ಆಗ್ತಾ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಓದುವವರು ಆರ್ಥಿಕವಾಗಿ ಹಿಂದುಳಿದ ಸಮುದಾಯದ ಮಕ್ಕಳು. ಕನ್ನಡ ಶಾಲೆಗಳಲ್ಲಿ ಕನ್ನಡವನ್ನೇ ಮುಚ್ಚುವ ಪರಿಸ್ಥಿತಿ ಉಂಟಾಗಿದೆ. ಕನ್ನಡ ಶಾಲೆಗಳು ಮುಚ್ಚುವ ಎಲ್ಲಾ ಹುನ್ನಾರಗಳು ನಡೆಯುತ್ತಿದೆ. ಅಕ್ಷರ, ಆರೋಗ್ಯ ಸರ್ಕಾರದ ಆದ್ಯತೆ ಆಗಬೇಕು. 100 ರೂ ಯಾಕೆ..? ನಿರ್ವಹಣಾ ವೆಚ್ಚ ಯಾಕೆ ಸರ್ಕಾರಕ್ಕೇನು ಕೊರತೆ.? ಎಂದು ಶಿಕ್ಷಣ ಇಲಾಖೆ ವಿರುದ್ಧ  ಕಿಡಿಕಾರಿದರು.

ಆದೇಶ ಹಿಂಪಡೆಯಬೇಕು…

ಕಡ್ಡಾಯ ಶಿಕ್ಷಣದ ಅಡಿ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣದ ಹಕ್ಕಿದೆ. ಆ ನೀತಿಯನ್ನೇ ಒಡೆದು ಹಾಕುವ ಪ್ರಯತ್ನ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಎಷ್ಟೋ ಮಕ್ಕಳು ಶಾಲೆ ಬಿಟ್ಟಿದ್ದಾರೆ. ಅವರನ್ನು ವಾಪಸ್ ಕರೆತರುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಸರ್ಕಾರ ಡ್ರಾಪ್ ಔಟ್ ಆದ ಮಕ್ಕಳನ್ನು ಕರೆತರುವ ಕೆಲಸ ಮಾಡಬೇಕು. ಇದರ ಬಗ್ಗೆ ಯಾವ ಮಂತ್ರಿಯೂ, ಯಾವ ಸರ್ಕಾರವೂ ಯೋಚನೆ  ಮಾಡ್ತಾ ಇಲ್ಲ. ಕನ್ನಡ ಶಾಲೆಗಳು ಬಾಗಿಲು ಹಾಕುವ ಪರಿಸ್ಥಿತಿ ಉಂಟಾಗಿದೆ. ಈ 100 ರೂ ಶುಲ್ಕ ಆದೇಶ ವಾಪಸ್ ಪಡೆಯಬೇಕು. ಒಂದು ಸರ್ಕಾರದ ,ಒಂದು ರಾಜ್ಯದ ಪ್ರಗತಿ ಆ ದೇಶದ ಶಿಕ್ಷಣ, ಅನ್ನ, ಆರೋಗ್ಯ ಅವಲಂಬಿಸಿರುತ್ತದೆ. ಬಡವರ ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ. ಇದರಿಂದ ಈ ಆದೇಶ ವಾಪಸ್ ಪಡೆಯಬೇಕು ಶಿಕ್ಷಣ ಇಲಾಖೆಗೆ ವಿಶ್ವನಾಥ್ ಒತ್ತಾಯಿಸಿದರು.

ದಲಿತರ ಮನೆಯಲ್ಲಿ ಊಟ ಇದೊಂದು ರೀತಿ ಫ್ಯಾಷನ್ ಆಗಿದೆ..

ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ  ದಲಿತರ ಮನೆಯಲ್ಲಿ ಊಟ ಮಾಡಿದ  ವಿಚಾರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್, ಇದೊಂದು ರೀತಿ ಫ್ಯಾಷನ್ ಆಗಿದೆ. ಮತ್ತೆ ಅಸ್ಪೃಶ್ಯತೆಯನ್ನ  ಈ ರಾಜಕಾರಣಿಗಳು ಮುಂದುವರೆಸುತ್ತಿದ್ದಾರೆ. ರಾಜಕಾರಣಿಗಳು ದಯಮಾಡಿ ಈ ನಾಟಕ ನಿಲ್ಲಿಸಿ. ದಯಮಾಡಿ ಅವಮಾನ ಮಾಡೋ ಕೆಲಸ ಮಾಡಬೇಡಿ. ನೀವಾಗಿಯೇ ಹೋಗ್ತಾ ಇರೋದು ಅವರೇನು ನಿಮ್ಮ ಕರೆದಿದ್ರಾ..? ಅವರು ಕರೆದಾಗ ಹೋಗಿ ಪರವಾಗಿಲ್ಲ.ನಿಮ್ಮದೇ ತಟ್ಟೆ, ನಿಮ್ಮದೇ ಊಟ ತಗೋಂಡು ಹೋಗಿ ಅವರ ಮನೆಯಲ್ಲಿ ಊಟ ಮಾಡಿ ಬರೋದು ಎಷ್ಟು ಸರಿ.ನಾಚಿಕೆಯಾಗಬೇಕು  ನಿಮ್ಮ ಬೂಟಾಟಿಕೆಗೆ. ಥೂ….ಛೀ….ಎಂದು ಹೆಚ್.ವಿಶ್ವನಾಥ್  ಅಸಮಧಾನ ವ್ಯಕ್ತಪಡಿಸಿದರು.

ದಲಿತರ ಮನೆಗೆ ಹೋಗಿ ಸರ್ಕಾರದ ಕಾರ್ಯಕ್ರಮಗಳ ಮೂಲಕ ಹೋಗಿ. ಹೋಟೆಲ್ ಊಟ ತಿನ್ನೋಕೆ ಅಲ್ಲಿಗೆ ಹೋಗಬೇಕಾ..? ಇದನ್ನ ನಾನು ಯಾರೇ ಮಾಡಿದರೂ ಖಂಡಿಸುತ್ತೇನೆ ಎಂದರು.

ಆದಿವಾಸಿ ಕರಿಯಪ್ಪ ಸಾವಿನ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ನ್ಯಾಯಾಧೀಶರು ಸುರೇಶ್ ನಿಂತುಕೊಂಡು ಶವಪರೀಕ್ಷೆ ಮಾಡಿಸಿದರು. 17ರ ಜನರ ಮೇಲೆ ಕೇಸ್ ಆಗಿದೆ. ಹೃದಯಾಘಾತದಿಂದ ಸತ್ತ ಅಂತ ಹೇಳ್ತಾರೆ. 17 ಜನ ಸಿಬ್ಬಂದಿ ಅರೆಸ್ಟ್ ಮಾಡಬೇಕು. ಗೃಹ ಇಲಾಖೆ ಒತ್ತಾಯ ಮಾಡುತ್ತೇನೆ. ತನಿಖಾ ಅಧಿಕಾರಿ ಬದಲಾವಣೆಯಾಗಿದೆ. ಆದಿವಾಸಿ‌ಗೆ ಯಾವ ಶಿಕ್ಷಣ ಇದೆ. ಅವರಿಗೆ ಶಿಕ್ಷಣ ಕೊಡಿ, ಅರಿವು ಮೂಡಿಸುವ ಕಾರ್ಯಕ್ರಮಗಳನ್ನ ಮಾಡಿ. ಕೃಷ್ಣ ಅವರ ಸರ್ಕಾರ ಇದ್ದಾಗ ಕಾಡಿಗೆ ಹೋಗಿ ಕ್ಯಾಬಿನೆಟ್ ಮೀಟಿಂಗ್ ಮಾಡಿಸಿದ್ವಿ. ಅದೇ ರೀತಿ ಈಗಿನ  ಸಿ. ಎಂ ಮಾಡಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬದಲಾವಣೆ: ಪ್ರತಾಪ್ ಸಿಂಹ ವಿರುದ್ಧ ವ್ಯಂಗ್ಯ.

ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬದಲಾವಣೆ ಹಾಗೂ ಸಂಸದ ಪ್ರತಾಪ್ ಸಿಂಹ ನಾನು ಉದ್ದೇಶ ಪೂರ್ವಕವಾಗಿಯೇ  ಬದಲಾವಣೆ ಮಾಡಿಸಿದ್ದು ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಅವರು ಡೊಡ್ಡವರು, ಮೈಸೂರು ಮಹಾರಾಜರಿಗಿಂತ ದೊಡ್ಡವರು, ಮಹಾರಾಜರಿಗಿಂತ ಹೆಚ್ಚಿನ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಏನು ಮಾತಾಡೋದು ಎಂದು ವ್ಯಂಗ್ಯವಾಡಿದರು.

Key words: MLC- H. Vishwanath- outrage- against -government – collecting- fees-School

ENGLISH SUMMARY…

All plans prepared to close Kannada schools: H. Vishwanath expresses ire against State Govt. for its plans to collect fee.
Mysuru, October 22, 2022 (www.justkannada.in): Member of the Legislative Council H. Vishwanath today severely criticized the Education Minister for planning to collect a sum of Rs. 100 fees from the Government Schools students.
Addressing a press conference in Mysuru today, H. Vishwanath informed that the school education is losing its track. “I don’t understand the purpose and decision of collecting Rs. 100 fee in government schools. The students who attend government schools hail from economically backward communities. A situation of shutting Kannada in Kannada schools has appeared. Plans are made to close Kannada medium schools. Education and Health should be the priorities of the government. Why Rs.100 fee? Can’t the government manage the schools?,” he fumed.
He demanded the State Government to immediately withdraw its decision.
Keywords: MLC H. Vishwanath/ Government schools/ Kannada/ fee