ಹೆಚ್.ವಿಶ್ವನಾಥ್ ಗೆ ಸಚಿವ ಸ್ಥಾನ ವಿಚಾರ: ಮಾರ್ಮಿಕವಾಗಿ ಉತ್ತರಿಸಿದ ಸಂಸದ ಶ್ರೀನಿವಾಸ್ ಪ್ರಸಾದ್…

Promotion

ಮೈಸೂರು,ಜು,22,2020(www.justkannada.in):  ಮಾಜಿ ಸಚಿವ ಹೆಚ್.ವಿಶ್ವನಾಥ್ ಗೆ ವಿಧಾನ ಪರಿಷತ್ ಸ್ಥಾನ ದೊರತಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಸಂಸದ ಶ್ರೀನಿವಾಸ್ ಪ್ರಸಾದ್, ಹೆಚ್.ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವ ಕುರಿತು ಮಾರ್ಮಿಕ ಉತ್ತರ ನೀಡಿದ್ದಾರೆ.jk-logo-justkannada-logo

ವಿಶ್ವನಾಥ ಛಲಬಿಡದ ತ್ರಿವಿಕ್ರಮ. ಈಗ ಅಟ್ಟಕ್ಕೆ ಏರಿದ್ದಾರೆ. ಸ್ವರ್ಗಕ್ಕೆ ಏರಿಬೇಕಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಮಾಧ್ಯಮದವರ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಎಂಎಲ್ ಸಿ ಆಗುತ್ತಿದ್ದಂತೆ ಹೆಚ್.ವಿಶ್ವನಾಥ್ ಇಂದು ಸಂಸದ ಶ್ರೀನಿವಾಸ್ ಪ್ರಸಾದ್ ರನ್ನ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಹೆಚ್.ವಿಶ್ವನಾಥ್ ಗೆ ಸಂಸದ ಶ್ರೀನಿವಾಸ್ ಪ್ರಸಾದ್ ಶುಭಹಾರೈಸಿದರು.

ವಿಶ್ವನಾಥ್ ಎಂಎಲ್ ಸಿ ಸ್ಥಾನ ದೊರೆತ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಹೆಚ್.  ವಿಶ್ವನಾಥ ಛಲಬಿಡದ ತ್ರಿವಿಕ್ರಮ. ಸಾಕಷ್ಟು ಅನುಭವವಿರುವ ರಾಜಕಾರಣಿ. ವಿಶ್ವನಾಥ್ ಅವರ ಅನುಭವದಿಂದ ಉತ್ತಮವಾದ ಕೆಲಸ ಮಾಡುವ ವಿಶ್ವಾಸವಿದೆ. ವಿಶ್ವನಾಥ್ ಬಗ್ಗೆ ಹೈಕಮಾಂಡ್ ಯೋಚನೆ ಮಾಡಿ ಎಂಎಲ್ ಸಿ ನಾಮನಿರ್ದೇಶನ ಮಾಡಿದ್ದಾರೆ. ಇದು ಅವರಿಗೆ ರಾಜಕೀಯ ಕೊನೆಯ ಅವಕಾಶ. ಅವರು ಬಹಳ ಯೋಚನೆ ಮಾಡಿ ಕೆಲಸ ಮಾಡುವಂತೆ ಸಲಹೆ ನೀಡುತ್ತೇನೆ ಎಂದರು.

ನಾವಿಬ್ಬರು ಸಮಾನಾ ವಯಸ್ಕರು. ವಿದ್ಯಾರ್ಥಿ ದೆಸೆಯಿಂದಲೂ ನಾವಿಬ್ಬರು ಒಟ್ಟಿಗೆ ಇದ್ದವರು. ಅವರು ಎಲ್ಲಾ ಏರುಪೇರು ಅನುಭವಿಸಿದ್ದಾರೆ. ಅಂತಿಮವಾಗಿ ಅವರಿಗೆ ಈಗ ಅವಕಾಶ ಸಿಕ್ಕಿದೆ. ಬಿಜೆಪಿ ನಾಯಕರು ಕೊಟ್ಟಿರುವ ಅವಕಾಶವಮ್ನ ಬಳಸಿಕೊಳ್ಳುವಂತೆ ಶುಭ ಕೋರಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.mlc-h-vishwanath-mp-srinivas-prasad-minister-position

ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಈಗ ಅಟ್ಟಕ್ಕೆ ಏರಿದ್ದಾರೆ. ಸ್ವರ್ಗಕ್ಕೆ ಏರಿಬೇಕಿದೆ. ಈಗ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದಾರೆ‌. ಇದಕ್ಕೇ  ಅವರು ಖುಷಿಪಟ್ಟುಕೊಂಡಿದ್ದಾರೆ.  ಸದ್ಯಕ್ಕೆ ಸಚಿವ ಸ್ಥಾನದ ವಿಚಾರದ ಬಗ್ಗೆ ಚರ್ಚೆ ಈಗ ಬೇಡ. ಇನ್ನುಳಿದ ಸಚಿವ ಸ್ಥಾನಕ್ಕೆ ಸರ್ಕಾರ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ. ಇದನ್ನ ಸರ್ಕಾರ ನೋಡಿಕೊಳ್ಳುತ್ತೆ ಎಂದರು.

Key words: MLC-H.Vishwanath-MP-Srinivas Prasad-minister position