ಜನಾಭಿಪ್ರಾಯ ಇರುವವರು ಮುಂದಿನ ಸಿಎಂ ಆಗ್ತಾರೆ ಎಂದ ಶಾಸಕ ಜಮೀರ್ ಅಹ್ಮದ್ ಖಾನ್.

Promotion

ಬೆಂಗಳೂರು,ಜುಲೈ,2,2021(www.justkannada.in): ಯಾರಿಗೆ ಜನಾಭಿಪ್ರಾಯ ಇರುತ್ತದೆಯೋ ಅವರು ಮುಂದಿನ ಸಿಎಂ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.jk

ಈ ಬಗ್ಗೆ ಮಾತನಾಡಿರುವ ಶಾಸಕ ಜಮೀರ್ ಅಹ್ಮದ್ ಖಾನ್,  ಮುಂದಿನ ಸಿಎಂ ಯಾರು ಎನ್ನುವುದರ ಬಗ್ಗೆ ಮಾತನಾಡಬೇಡಿ. ನಾನು ಮುಂದಿನ ಸಿಎಂ ಎಂದು ಹೇಳಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ನಾನು ಆ ವಿಚಾರದ ಬಗ್ಗೆ ಮಾತನಾಡಲ್ಲ ಎಂದರು.

ಇನ್ನು ಸಿಎಂ ಸ್ಥಾನದ ಬಗ್ಗೆ ಹಲವರು ಮಾತನಾಡುತ್ತಿದ್ದಾರೆ. ಲಿಂಗಾಯತರಲ್ಲಿ ನಮಗೆ ಕೊಡಿ ಅಂತ ಎಂಬಿ ಪಾಟೀಲ್ ಹೇಳ್ತಾರೆ. ಅಲ್ಪಸಂಖ್ಯಾತರಲ್ಲಿ ಸಿ.ಎಂ.ಇಬ್ರಾಹಿಂ ಕೊಡಿ ಅಂತಾರೆ. ತನ್ವೀರ್ ಸೇಠ್​ ನಾನು ಮುಖ್ಯಮಂತ್ರಿ ಅಂದಿದ್ದಾರೆ. ಹೀಗಾಗಿ ಮುಂದಿನ ಸಿಎಂ ಯಾರು ಎಂಬುವುದನ್ನು ಜನರು ಮತ್ತು ನಮ್ಮ ಹೈ ಕಮಾಂಡ್​ ತೀರ್ಮಾನ ಮಾಡುತ್ತದೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಇತ್ತೀಚೆಗೆ  ಸಿದ್ದರಾಮಯ್ಯ ಅವರನ್ನ ಶಾಸಕ ಜಮೀರ್ ಅಹ್ಮದ್ ಖಾನ್ ಭಾವಿ ಸಿಎಂ ಎಂದು ಹೇಳಿದ್ದರು. ಇದಾದ ಬಳಿಕ ಕಾಂಗ್ರೆಸ್ ಕೆಲ ಶಾಸಕರು ಸಹ ಸಿದ್ಧರಾಮಯ್ಯ ಮುಂದಿನ ಸಿಎಂ ಎಂಬ ಹೇಳಿಕೆ ನೀಡಿದ್ದಿದ್ದರು.  ನಂತರ ಮುಂದಿನ ಸಿಎಂ ಅಭ್ಯರ್ಥಿ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಗೊಂದಲ, ಚರ್ಚೆಗಳು  ನಡೆಯುತ್ತಿದೆ.

Key words: MLA-Zamir Ahmed Khan – public-next CM