ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ವಿಚಾರ: ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದು ಹೀಗೆ…

Promotion

ನವದೆಹಲಿ,ಡಿ.13,2019(www.justkannada.in): ರಾಜ್ಯದ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 12 ಸ್ಥಾನದಲ್ಲಿ ಗೆದ್ದು  ಸೇಫ್ ಆಗಿರುವ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಹಲವರು ಲಾಬಿ ನಡಸುತ್ತಿದ್ದು ಈ ನಡುವೆ ಹಿರಿಯ ಶಾಸಕ ಉಮೇಶ್ ಕತ್ತಿ ಮಂತ್ರಿಗಿರಿಗೆ ಬಿಗಿಪಟ್ಟು ಹಿಡಿದಿದ್ದಾರೆ.

ಇನ್ನು ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಲಕ್ಷ್ಮಣ್ ಸವದಿ, ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಿಎಂ ಪರಮಾಧಿಕಾರ.  ಉಮೇಶ್ ಕತ್ತಿ ಸಚಿವರಾದ್ರೆ ಇನ್ನೊಂದು ಸ್ಥಾನ ಬೆಳಗಾವಿಗೆ ಬರುತ್ತದೆ. ಈಗಾಗಲೇ ಬೆಳಗಾವಿಯಿಂದ ಇಬ್ಬರು ಸಚಿವರಿದ್ದೇವೆ. ಇನ್ನು ಮೂವರು ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಉಮೇಶ್ ಕತ್ತಿಗೆ ಸ್ಥಾನ ನೀಡಿದ್ರೆ ಬೆಳಗಾವಿ ಜಿಲ್ಲೆಗೆ 6 ಸಚಿವ ಸ್ಥಾನ ನೀಡಿದಂತಾಗುತ್ತದೆ. ಬೆಂಗಳೂರು ಬಿಟ್ಟರೆ ಹೆಚ್ಚು ಸಚಿವ ಸ್ಥಾನ ಬೆಳಗಾವಿ ಜಿಲ್ಲೆಗೆ ನೀಡಿದಂತಾಗುತ್ತದೆ ಎಂದರು.

ಡಿಸಿಎಂ ಸ್ಥಾನ ರದ್ದು ವಿಚಾರ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ್ ಸವದಿ, ಡಿಸಿಎಂ ಹುದ್ದೆ ಸೃಷ್ಠಿಸಿರುವುದು ಹೈಕಮಾಂಡ್, ನಾನು ಪಕ್ಷದ ಶಿಸ್ತಿನ ಸಿಪಾಯಿ.  ಪಕ್ಷ ವಹಿಸಿದ ಕೆಲಸವನ್ನು ಶ್ರದ್ದೆಯಿಂದ ಮಾಡುವುದಷ್ಟೇ ನನ್ನ ಕೆಲಸ. ಡಿಸಿಎಂ ಹುದ್ದೆ ಸೃಷ್ಟಿ ಪಕ್ಷದ ವರಿಷ್ಠರ ನಿರ್ಣಯ ಎಂದು  ಹೇಳಿದರು.

Key words: MLA- Umesh katti-minister-position- DCM- Laxman Savadi -reaction