ಮೈಸೂರು ಮೇಯರ್ ಚುನಾವಣೆ ‘ಕೈ’ ಸೋಲಿನ ಹೊಣೆ ಹೊತ್ತ ಶಾಸಕ ತನ್ವೀರ್ ಸೇಠ್.

ಮೈಸೂರು,ಆಗಸ್ಟ್,25,2021(www.justkannada.in): ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹಗ್ಗಜಗ್ಗಾಟದಿಂದಾಗಿ ಮೈಸೂರು ಮೇಯರ್ ಪಟ್ಟ ಬಿಜೆಪಿ ಪಾಲಾಗಿದ್ದು ನೂತನ ಮೇಯರ್ ಆಗಿ ಸುನಂದ ಪಾಲನೇತ್ರಾ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹೊಣೆಯನ್ನ ಹೊತ್ತಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ತನ್ವೀರ್ ಸೇಠ್,  ಕಳೆದ ಬಾರಿ ಪಕ್ಷ ಹಾಗೂ ನಗರದ ಹಿತಕ್ಕಾಗಿ ನಾನು ರಿಸ್ಕ್ ತೆಗೆದುಕೊಂಡಿದ್ದೆ. ಈ ಬಾರಿ ಕೇವಲ ಪಕ್ಷದ ಹಿತ ಮುಖ್ಯ ಆಗಿತ್ತು. ಈಗಾಗಿ ವರಿಷ್ಠರು ಹೇಳಿದಷ್ಟು ಮಾಡಿದ್ದೇನೆ. ಅಲ್ಲದೆ ಕೊನೆ ಗಳಿಗೆಯಲ್ಲಿ ನಮಗೆ ವರಿಷ್ಟರಿಂದ ಸಂದೇಶ ಬರೋದು ಲೇಟ್ ಆಯ್ತು. ಸ್ಥಳಿಯವಾಗಿ ಹಲವು ಕಾರಣಗಳಿಂದ ನಮಗೆ ಅಧಿಕಾರ ತಪ್ಪಿದೆ. ಪ್ರಯತ್ನದ ನಡುವೆಯೂ ಆದ ಸೋಲು, ಇದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದಿದ್ದಾರೆ.start-oxygen-bus-service-mysore-mla-tanvir-sait-letter-incharge-minister

ಇಬ್ಬರೂ ಮೈತ್ರಿಗೆ ಪಟ್ಟು ಹಿಡಿದಿದ್ದರಿಂದ ಬಿಜೆಪಿಗೆ ಅಧಿಕಾರ ಸಿಕ್ಕಿದೆ. ನಿನ್ನೆ ರಾತ್ರಿಯೂ ಸಾ.ರಾ ಮಹೇಶ್ ಜೊತೆ ಮಾತುಕತೆ ನಡೆಸಿದ್ದೆ. ನಮ್ಮ ಉಪಮೇಯರ್ ರಾಜಿನಾಮೆ ಕೊಡಿಸಿ ನಿಮಗೆ ಕೊಡ್ತೀವಿ ಅಂತಲೂ ಹೇಳಿದ್ದೆವು‌. ಆದ್ರೆ ಜೆಡಿಎಸ್ ನವರು ಮಾತು ಕೇಳಲಿಲ್ಲ. ಬಿಜೆಪಿಯಲ್ಲಿ ಹೆಚ್ಚು ಸದಸ್ಯರು ಇರುವುದರಿಂದ ಅವರು ಅಧಿಕಾರ ಹಿಡಿದಿದ್ದಾರೆ ಎಂದು ತನ್ವೀರ್ ಸೇಠ್ ಹೇಳಿದರು.

Key words: MLA- Tanveer Sait-  responsible -Mysore mayor- election-lose