ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಎಸ್.ಆರ್ ಶ್ರೀನಿವಾಸ್ ಏಕವಚನದಲ್ಲೇ ವಾಗ್ದಾಳಿ.

Promotion

ತುಮಕೂರು,ನವೆಂಬರ್,1,2021(www.justkannada.in):  ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಸೋಲಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಎಸ್.ಆರ್ ಶ್ರೀನಿವಾಸ್, ಹೆಚ್.ಡಿ ದೇವೇಗೌಡರ ಸೋಲಿನ ಬಗ್ಗೆ ಪ್ರಸ್ತಾಪಿಸಿದ್ದೀರಿ. ಎಲ್ಲಿಗೆ ಬೇಕಾದರೂ ಬಂದು ನಾನು ಪ್ರಮಾಣ ಮಾಡುತ್ತೇನೆ. ನಾನು ದೈವಭಕ್ತನಲ್ಲ ನೀವು ಎಲ್ಲಿಗೆ ಕರೆದರೂ ಬರುತ್ತೇನೆ. ಹೆಚ್.ಡಿ ದೇವೇಗೌಡರ ಸೋಲಿಗೆ ನಾನು ಕಾರಣ ಅಲ್ಲ. ಹೆತ್ತ ತಾಯಿಗೆ  ದ್ರೋಹ ಮಾಡುವ ಕೆಲಸ ನಾನು ಮಾಡಲ್ಲ. ನೀನು ಆ ಕೆಲಸ  ಮಾಡುವುದಕ್ಕೆ ನಾಚಿಕೆ ಆಗಲ್ವಾ..? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ನಾನು ಸೀಮಂತ ಕಾರ್ಯಕ್ಕೆ ಬಂದಾಗ ಮಾತನಾಡಿಸಲಿಲ್ಲ. ಯಾವ ಊರ ನಾಯಿ ಎನ್ನಲಿಲ್ಲ. ಸಾ.ರಾ ಮಹೇಶ್ ಹೇಳಿದರೂ ಮಾತನಾಡಿಸಲಿಲ್ಲ ಎಂದು ಕಿಡಿಕಾರಿದರು.

Key words: MLA -SR Srinivas – against -former CM -HD Kumaraswamy.