ದೇವಿಕೆರೆ ಹಾಗೂ ಹಿರೇಕೆರೆಯ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಎಸ್.ಎ ರಾಮದಾಸ್ ಭೂಮಿ ಪೂಜೆ.

ಮೈಸೂರು,ಜೂನ್,28,2022(www.justkannada.in): ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಮೈಸೂರು ವತಿಯಿಂದ ಚಾಮುಂಡಿ ಬೆಟ್ಟದ ದೇವಿಕೆರೆ ಹಾಗೂ ಹಿರೇಕೆರೆಯ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ  ಎಸ್.ಎ ರಾಮದಾಸ್ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ತಾಯಿ ಚಾಮುಂಡೇಶ್ವರಿಯ ಅಭಿಷೇಕಕ್ಕಾಗಿ ಪ್ರತಿನಿತ್ಯ ಬೆಳಗಿನ ಜಾವ ದೇವಿಕೆರೆಯಿಂದ ನೀರು ತೆಗೆದುಕೊಂಡು ಹೋಗುವ ಕೈಂಕರ್ಯ ನಡೆಯುತ್ತದೆ. ದೇವಿಕೆರೆಯಲ್ಲಿ ಇರುವಂತಹ ಹೂಳು ತೆಗೆಯುವುದು, ಕುಲುಷಿತವಾಗಿರುವ ನೀರನ್ನು ಶುಚಿಗೊಳಿಸುವುದು.  ದೊಡ್ಡ ಬಿಂದಿಗೆಯಲ್ಲಿ ನೀರಿನ ತೆಗೆದುಕೊಂಡು ಹೋಗುವಂತ ಸಂದರ್ಭದಲ್ಲಿ ದೇವಿಕೆರೆಯಿಂದ ಚಾಮುಂಡಿ ದೇವಸ್ಥಾನದವರಿಗೆ ಇರುವ ಎಲ್ಲ ಮಾರ್ಗಗಳು  ಶಿಥಿಲವಾಗಿರುತ್ತದೆ ಹಾಗೂ ನೀರನ್ನು ಹೊತ್ತಿಕೊಂಡು ಹೋಗುವ ಸಂದರ್ಭದಲ್ಲಿ ಮೇಲೆ ಹತ್ತುಲು ಅನುಕೂಲವಾಗಲೆಂದು ರೈಲಿಂಗ್ಸ್ ಆಳವಡಿಸಲಾಗುವುದು ಎಂದರು.

ಹಾಗೆಯೇ ಚಾಮುಂಡಿಬೆಟ್ಟದಲ್ಲಿ ಸುಮಾರು ನೂರಕ್ಕಿಂತಲೂ ಹೆಚ್ಚು ಪುಟ್ಟ ಪುಟ್ಟ ಕೊಳಗಳಿರುವುದು ನಕ್ಷೆಯಲ್ಲಿ ಕಂಡುಬಂದಿರುತ್ತದೆ. 2ನೇ ಹಂತದಲ್ಲಿ ಕೊಳಗಳನ್ನು ಕೂಡ ಶಾಶ್ವತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ರಾಮದಾಸ್ ತಿಳಿಸಿದರು.

ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಭರತ್ ಕಾಳಯ್ಯ, ನವಿಲು ನಾಗರಾಜು, ಶಶಿಶೇಖರ್ ದೀಕ್ಷಿತ್, ದೇವಸ್ಥಾನದ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಚಾಮುಂಡಿ ಬೆಟ್ಟದ ಗ್ರಾಮಸ್ಥರು ಉಪಸ್ಥಿತರಿದ್ದರು.

Key words: MLA -SA Ramdas -Bhoomi Pooja -development work -mysore