ಕೊರೋನಾ ಪೀಡಿತ ಕುಟುಂಬಗಳಿಗೆ ಆಯುಷ್ ಕಿಟ್ ವಿತರಣೆ ಮಾಡಿದ ಶಾಸಕ ರಾಮದಾಸ್..

Promotion

ಮೈಸೂರು,ಜು,28,2020(www.justkannada.in):  ಮೈಸೂರಿನ ಕೆ.ಆರ್ ಕ್ಷೇತ್ರದಲ್ಲಿ ಕೊರೋನಾ ಸೋಂಕು  ಹೆಚ್ಚಾಗಿ ಕಂಡು ಬಂದಿದ್ದು ಈ ನಡುವೆ ಕ್ಷೇತ್ರದ  ಕೊರೊನಾ ಪೀಡಿತ ಕುಟುಂಬಗಳಿಗೆ  ಶಾಸಕ ಎಸ್.ಎ ರಾಮದಾಸ್ ಆಯುಷ್ ಕಿಟ್ ವಿತರಣೆ ಮಾಡಿದರು.jk-logo-justkannada-logo

ರೋಗ ನಿರೋಧಕ ಶಕ್ತಿ ವರ್ಧನೆ ಹಿನ್ನೆಲೆಯಲ್ಲಿ ಕೊರೋನಾ ಪೀಡಿತ ಕುಟುಂಬಗಳಿಗೆ ಶಾಸಕ ಎಸ್.ಎ ರಾಮದಾಸ್ ಆಯುಷ್ ಕಿಟ್ ವಿತರಣೆ ಮಾಡಿದರು. ಚ್ಯವನಪ್ರಾಶ್, ಕಷಾಯಪುಡಿ, ಕಾಳುಮೆಣಸು, ಶುಂಠಿ, ಅರಿಶಿನಪುಡಿ, ನಿಂಬೆಹಣ್ಣು ಸೇರಿದಂತೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಹಲವು ಪದಾರ್ಥಗಳನ್ನು ಕಿಟ್ ಒಳಗೊಂಡಿದೆ.

ವಿದ್ಯಾರಣ್ಯಪುರಂ ನ ಕಂಟೈನ್ಮೆಂಟ್ ಭಾಗದ ಹಲವು ಮನೆಗಳಿಗೆ ಆಯುಷ್ ಕಿಟ್ ವಿತರಣೆ ಮಾಡಲಾಯಿತು. ಶಾಸಕ ರಾಮದಾಸ್ ಗೆ ವಿವಿಧ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು.

ವಿತರಣೆ ವೇಳೆ ಶಾಸಕ ಎಸ್.ಎ ರಾಮದಾಸ್ ನಿವಾಸಿಗಳ ಕುಂದು ಕೊರತೆ ಆಲಿಸಿದರು. ಇದೇ ವೇಳೇ ಸ್ಥಳೀಯ ನಿವಾಸಿಗಳು ಚರಂಡಿ ಮತ್ತು ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ರಾಮದಾಸ್ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Key words: MLA-SA Ramadas-distributed – AYUSH kit – Corona-affected –families-mysore