ಸಿಎಂ ಹೊರತುಪಡಿಸಿ ಬೇರೆಯವರು ಬದಲಾಗಬೇಕು- ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹ

Promotion

ಬೆಂಗಳೂರು,ಜನವರಿ,14,2022(www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆಗಾಗಿ ಸಚಿವಾಕಾಂಕ್ಷಿಗಳು ಜಾತಕಪಕ್ಷಿಯಂತೆ ಕಾದು ಕುಳಿತಿದ್ದು ಈ ಮಧ್ಯೆ ಕೆಲ ಸಚಿವರನ್ನ ಕೈ ಬಿಟ್ಟು ಹೊಸಮುಖಗಳಿಗೆ ಅವಕಾಶ ನೀಡಬೇಕು ಎಂದು ಕೆಲ ಶಾಸಕರು  ಒತ್ತಾಯಿಸಿದ್ದಾರೆ.

ಶಾಸಕ ಎಂ.ಪಿ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವು ಶಾಸಕರು ಸಚಿವರ ಬದಲಾವಣೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಾಸಕ ರೇಣುಕಾಚಾರ್ಯ, ಸಂಪುಟ ಪುನರಚನೆ ವಿಚಾರದಲ್ಲಿ ಯತ್ನಾಳ್ ಹೇಳಿಕೆ ಸರಿ ಇದೆ. ಸಿಎಂ ಹೊರತು ಪಡಿಸಿ ಬೇರೆಯವರು ಬದಲಾಗಬೇಕು. ಅದೇ ಮುಖ ನೋಡಿ ನೋಡಿ ಸಾಕಾಗಿದೆ. ಹೊಸಮುಖಗಳಿಗೆ ಅವಕಾಶ ನೀಡಬೇಕು ಎಂದಿದ್ದಾರೆ.

ನನಗೆ ನೀಡಿರುವ ರಾಜಕೀಯ ಕಾರ್ಯದರ್ಶಿ ಸ್ಥಾನ ಏನು ನನಗೆ ದೊಡ್ಡದಲ್ಲ. ನನಗೆ ಸಿಎಂ ರಾಜಕೀಯ ಸ್ಥಾನ ಬೇಕಿಲ್ಲ. ಇದು ಬಂದ ಪುಟ್ಟ ಹೋದ ಪುಟ್ಟ ಇದ್ದಂತೆ.  ಸುಮ್ಮನೆ ಮನೆ ಕೊಡ್ತಾರೆ. ಚೇಂಬರ್ ಕೊಡ್ತಾರೆ. ಏನು ಕೆಲಸ ಇಲ್ಲ. ನಾನು ಶಾಸಕನಾಗಿಯೇ ಇರುತ್ತೇನೆ ಎಂದು ಎಂ.ಪಿ ರೇಣುಕಾಚಾರ್ಯ ತಿಳಿಸಿದರು.

Key words: MLA- renukacharya-cabinet- restructure